ಬೆಂಗಳೂರು: ಕಾವೇರಿಗಾಗಿ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದರೆ ಸಚಿವೆ ಉಮಾಶ್ರೀ ರಂಗೋಲಿ ಬಿಡಿಸುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾವೇರಿಗಾ ನೀರನ್ನು ಉಳಿಸುವ ಸಂಬಂಧ ಶುಕ್ರವಾರ ವಿಶೇಷ ಅಧಿವೇಶನವನ್ನು ಕರೆಯಲಾಗಿತ್ತು. ಆರಂಭದಲ್ಲಿ ಸಂತಾಪ ಸೂಚನೆ ನಿರ್ಣಯ ಕೈಗೊಂಡು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನಿರ್ಣಯ ಮಂಡಿಸಿದರೆ, ಜೆಡಿಎಸ್ ಸದಸ್ಯ ವೈಎಸ್‍ವಿ ದತ್ತಾ ಅನುಮೋದಿಸಿದರು.
ಇದಾದ ಬಳಿಕ ಜಲಸಂನ್ಮೂಲಕ ಸಚಿವ ಎಂಬಿ ಪಾಟೀಲ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕಾವೇರಿ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಸದನದಲ್ಲಿ ಗಂಭೀರ ಚರ್ಚೆ ನಡೆಯುತ್ತಿದ್ದರೆ ಕನ್ನಡ ಮತ್ತು ಸಂಸ್ಕøತಿ ಖಾತೆಯ ಸಚಿವೆ ಉಮಾಶ್ರೀ ತನಗೂ ಚರ್ಚೆಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಪೇಪರ್‍ನಲ್ಲಿ ರಂಗೋಲಿ ಬಿಡಿಸುತ್ತಾ ಕುಳಿತ್ತಿದ್ದರು.