ಬೀಜಿಂಗ್: ಇತ್ತೀಚಿನ ದಿನಗಳಲ್ಲಿ ಮಕ್ಕಳು ಅಂತರ್ಜಾಲದಲ್ಲೇ ಹೆಚ್ಚು ಕಾಲಕಳೆಯುತ್ತಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಸಮಯವ್ಯರ್ಥ ಮಾಡ್ತಾರೆ. ಇದೇ ರೀತಿ ಹುಚ್ಚಿಗೆ ಬಿದ್ದಿದ್ದ ಯುವತಿಯೊಬ್ಬಳು ತನ್ನ ತಾಯಿಯನ್ನೇ ಕೊಲೆಗೈದಿದ್ದಾಳೆ.
ಹೌದು. ಇಂತಹದೊಂದು ಘಟನೆ ಚೀನಾದಲ್ಲಿ ನಡೆದಿದ್ದು, ಇಂಟರ್‍ನೆಟ್‍ನ ಬಗ್ಗೆ ಭಾರೀ ಹುಚ್ಚಿದ್ದ 16 ವರ್ಷದ ಬಾಲಕಿ ತನ್ನ ತಾಯಿಯನ್ನೇ ಕೊಲೆ ಮಾಡಿದ್ದು, ತಂದೆಗೂ ಇರಿದಿದ್ದು, ಅವರೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ?: ಬಾಲಕಿ ಯಾವಾಗಲೂ ಇಂಟರ್‍ನೆಟ್‍ನಲ್ಲೇ ಹೆಚ್ಚು ಸಮಯಕಳೆಯುತ್ತಿದ್ದು, ಪರಿಣಾಮ ಶಾಲೆಯಿಂದಲೂ ಹೊರಹಾಕ್ಪಟ್ಟಿದ್ದಳು. ಇದರಿಂದ ಮಗಳ ಭವಿಷ್ಯದ ಬಗ್ಗೆ ಚಿಂತಿಸಿದ್ದ ಪೋಷಕರು ಸಂಬಂಧಿಯೊಬ್ಬರ ಸಲಹೆ ಮೇರೆಗೆ ಟ್ರೀಟ್‍ಮೆಂಟ್ ಸೆಂಟರ್‍ಗೆ ಕಳುಹಿಸಿದ್ದರು. ಆದ್ರೆ ಇದೀಗ ಈ ಸೆಂಟರ್‍ಗಳು ಮಿಲಿಟರಿ ಬೂಟ್‍ಕ್ಯಾಂಪ್‍ಗಳಾಗಿದ್ದು, ಅಲ್ಲಿ ಬಾಲಕಿಗೆ ದಂಡಂ ದಶಗುಣಂ ಶೈಲಿಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇದರಿಂದ ಕೋಪಗೊಂಡ ಬಾಲಕಿ ಅಲ್ಲಿಂದ ಬಂದ ಮೇಲೆ ಪೋಷಕರ ಮೇಲೆ ಸೇಡುತೀರಿಸಿಕೊಂಡಿದ್ದಾಳೆ.
ಸದ್ಯ ಬಾಲಕಿಯನ್ನ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಆಕೆ ತನಗೆ ಬೂಟ್ ಕ್ಯಾಂಪ್‍ನಲ್ಲಿ ಯಾವುದೇ ಕಾರಣವಿಲ್ಲದೇ ಥಳಿಸುತ್ತಿದ್ದರು, ಏನೇನೂ ತಿನ್ನಲು ಹೇಳುತ್ತಿದ್ದರು. ಇವರ ಚಿತ್ರಹಿಂಸೆಯಿಂದ ನಾನು ಕೋಪಗೊಂಡಿದ್ದೆ ಮನೆಗೆ ಬಂದ ತಕ್ಷಣ ಅಪ್ಪನ ಬಳಿ ಜಗಳವಾಡಿದ್ದೆ, ಈ ವೇಳೆ ಜಗಳ ತಾರಕ್ಕೇರಿದ್ದು, ನಂತರ ತಾಯಿಯನ್ನ ಕೊಲೆ ಮಾಡಿದ್ದಾಗಿ ಹೇಳಿದ್ದಾಳೆ.