Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

ಹೈವೇಯಲ್ಲಿರುವ ಎಲ್ಲ ಹಂಪ್ಸ್‍ಗಳನ್ನು ತೆಗೆಯಿರಿ: ಸಾರಿಗೆ ಸಚಿವಾಲಯ

$
0
0

ನವದೆಹಲಿ:  ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲ ಹಂಪ್ಸ್‍ಗಳನ್ನು ತೆಗೆದು ಹಾಕಿ ಎಂದು ಕೇಂದ್ರ ಸಾರಿಗೆ ಸಚಿವಾಲಯ ಎಲ್ಲ ರಾಜ್ಯ ಸಚಿವಾಲಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯದ ಲೋಕೋಪಯೋಗಿ ಇಲಾಖೆಗೆ ಆದೇಶಿಸಿದೆ.

ಸುಗಮ ಸಂಚಾರ ವ್ಯವಸ್ಥೆಗೆ ಸ್ಪೀಡ್ ಬ್ರೇಕರ್‍ಗಳು ಅಡ್ಡಿಯಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಣಯ ಕೈಗೊಂಡಿದ್ದು, ಮುಂದಿನ ಬುಧವಾರ ಸಚಿವಾಲಯ ಇದರ ಬಗ್ಗೆ ಸಮಗ್ರವಾದ ವಿವರವನ್ನು ಪ್ರಕಟಿಸಲಿದೆ.

 2014ರ ರಸ್ತೆ ಅಪಘಾತ  ವರದಿಯನ್ನು ಸಚಿವಾಲಯ ಪ್ರಕಟಿಸಿದ್ದು, ಈ ವರದಿಯಲ್ಲಿ 4726 ಮಂದಿ ಹಂಪ್ಸ್‍ಗಳಿಂದ ಸಂಭವಿಸಿದ ಅಪಘಾತ ಮೃತಪಟ್ಟರೆ, 6672 ಮಂದಿ ಸ್ಪೀಡ್ ಬ್ರೇಕರ್ ಮತ್ತು ರಸ್ತೆ ಗುಂಡಿಗಳಿಂದಾದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವ ಅಂಶವಿದೆ. ಹೀಗಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

The post ಹೈವೇಯಲ್ಲಿರುವ ಎಲ್ಲ ಹಂಪ್ಸ್‍ಗಳನ್ನು ತೆಗೆಯಿರಿ: ಸಾರಿಗೆ ಸಚಿವಾಲಯ appeared first on Public TV.


Viewing all articles
Browse latest Browse all 80415


<script src="https://jsc.adskeeper.com/r/s/rssing.com.1596347.js" async> </script>