ಗುಸ್ಟಾವಿಯಾ: ವಿಮಾನಗಳು ಹಾರವುದನ್ನು ವಿಭಿನ್ನವಾಗಿ ಫೋಟೋ ತೆಗೆಯುವ ಕ್ರೇಜ್ ಫೋಟೋಗ್ರಾಫರ್‍ಗಳಿಗೆ ಇದ್ದೇ ಇರುತ್ತೆ. ಆದ್ರೆ ಇಲ್ಲೊಬ್ಬ ಫೋಟೋಗ್ರಾಫರ್ ಫೋಟೋ ತೆಗೆಯುವ ವೇಳೆ ವಿಮಾನ ತಲೆಮೇಲೆಯೇ ಹಾರಿಹೋಗಿದ್ದು, ಪ್ರಾಣಾಪಾಯದಿಂದ ಜಸ್ಟ್ ಬಚಾವ್ ಆಗಿದ್ದಾರೆ.
ಹೌದು. ಕೆರೆಬಿಯನ್ ಐಲ್ಯಾಂಡ್ ಸೆಂಟ್ ಬಾರ್ಥಾಸ್ ಏರ್‍ಪೋರ್ಟ್ ಬಳಿ ಈ ಘಟನೆ ನಡೆದಿದ್ದು, ಮಿನಿ ವಿಮಾನವೊಂದು ಲ್ಯಾಂಡ್ ಆಗಲು ಬರಬೇಕಾದ್ರೆ ಎತ್ತರದ ಪ್ರದೇಶದಲ್ಲಿ ನಿಂತಿದ್ದ ಫೋಟೋಗ್ರಾಫರ್ ಫೋಟೋ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ವಿಮಾನ ಆತನ ತಲೆಯನ್ನೇ ಎಗರಿಸುವಷ್ಟು ಹತ್ತಿರದಲ್ಲಿ ಹಾರಿ ಹೋಗಿದೆ.
ವಿಮಾನ ತೀರ ಹತ್ತಿರದಲ್ಲಿ ಬಂದ ತಕ್ಷಣ ಫೋಟೋಗ್ರಾಫರ್ ಕೆಳಗೆ ಭಾಗಿ ರಕ್ಷಣೆ ಮಾಡಿಕೊಂಡಿದ್ದಾನೆ. ಸದ್ಯ ವಿಮಾನ ಫೋಟೋಗ್ರಾಫರ್ ತಲೆಮೇಲೆ ಹಾರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
The post ಜಸ್ಟ್‍ಮಿಸ್: ಫೋಟೋಗ್ರಾಫರ್ ತಲೆಮೇಲೆ ಹಾರಿತು ವಿಮಾನ appeared first on Public TV.