ಬೆಂಗಳೂರು: ನೂರು ಅಡಿ ಎತ್ತರದ ಕಟೌಟ್ ನಿರ್ಮಿಸಿ ವಿಷ್ಣುದಾದ ಹೆಸರಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿರುವ ಕೋಡಿರಾಮಕೃಷ್ಣ ಸಾರಥ್ಯದ ಸಾಜೀದ್ ಖುರೇಷಿ ನಿರ್ಮಾಣದ ನಾಗರಹಾವು ಚಿತ್ರತಂಡ ಈಗ ವಿಷ್ಣುವರ್ಧನ್ ಅವರ 67ನೇ ಹುಟ್ಟುಹಬ್ಬಕ್ಕೆ 67 ಅಡಿ ಉದ್ದದ 1,100 ಕೆಜಿ ತೂಕದ ಕೇಕ್ ಮಾಡುತ್ತಿದೆ.
ಈಗಾಗ್ಲೇ 4 ದಿನದಿಂದ 13 ಜನರ ತಂಡ ಕೇಕ್ ತಯಾರಿಯಲ್ಲಿ ಬ್ಯುಸಿಯಾಗಿದ್ದು 450 ಕೆ.ಜಿ ರೆಡಿಯಾಗಿದೆ. ಸ್ಕಿಲ್‍ಶ್ರೀ ಟ್ರಸ್ಟ್ ಕೇಕ್ ತಯಾರಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಅನಾಥಮಕ್ಕಳು, ವಿಧವೆಯರು ಮತ್ತು ಅಂಗವಿಕಲರು ಈ ಕೇಕ್‍ನ ತಯಾರಿಸುತ್ತಿರುವುದು ಮತ್ತೊಂದು ವಿಶೇಷ.
ಕೇಕ್ ನಿರ್ಮಾಣ ಉಸ್ತುವಾರಿ ಹೊತ್ತಿರುವ ಸ್ಕಿಲ್‍ಶ್ರೀ ಟ್ರಸ್ಟ್‍ನ ಸುಧಾಕರ್ ಪ್ರತಿಕ್ರಿಯಿಸಿ, ಈ ಕೇಕ್ ಮಾಡಲು ಆರ್ಡರ್ ಸಿಕ್ಕಿರುವುದು ನಮ್ಮ ಅದೃಷ್ಟ. ವಿಷ್ಟುವರ್ಧನ್ ಅವರ ಸೇವೆ ಮಾಡುವ ಉದ್ದೇಶದಿಂದ ಲಾಭ-ನಷ್ಟದ ಲೆಕ್ಕಾಚಾರ ಮಾಡದೇ ಸಿಕ್ಕಿರುವ ಕಡಿಮೆ ಸಮಯದಲ್ಲಿ ಉತ್ತಮ ಕೇಕ್ ರೆಡಿ ಮಾಡಲು ಹಗಲಿಡಿ ಶ್ರಮಿಸುತ್ತಿದೆ ಎಂದರು.
ಒಟ್ಟಾರೆ ವಿಷ್ಟುದಾದ ಅವರ ಸ್ಮಾರಕ ಸ್ಥಳಾಂತರ ವಿಚಾರ ಅಭಿಮಾನಿಗಳಿಗೆ ಬೇಸರತಂದಿದ್ದರೆ ಮತ್ತೊಂದು ಕಡೆ ಸಾಹಸಸಿಂಹನ ಹುಟ್ಟುಹಬ್ಬ ಆಚರಣೆಗೆ ನಾಗರಹಾವು ಚಿತ್ರತಂಡದಿಂದ ಭರ್ಜರಿ ತಯಾರಿ ನಡೆಯುತ್ತಿರುವುದು ಸಂತೋಷ ತಂದಿದೆ.
ಅದ್ಧೂರಿ ಆಡಿಯೋ ಲಾಂಚ್‍ಗೆ ಬ್ರೇಕ್ ಹಾಕಿದ ಚಿತ್ರತಂಡ ಈ ಕಾರ್ಯಕ್ರಮಕ್ಕೆ ಖರ್ಚಾಗುವ ಹಣವನ್ನು ಬಡವರ ಆರೋಗ್ಯ ಸುಧಾರಣೆಗೆ ನೀಡಿ ಸಹಾಯ ಮಾಡಿದೆ. 25 ಜನರಿಗೆ ತಲಾ 1 ಲಕ್ಷ ರೂ. ನೀಡುವ ಮೂಲಕ ಹಲವರ ಜೀವನಕ್ಕೆ ಬೆಳಕು ನೀಡಿದೆ ನಾಗರಹಾವು ಚಿತ್ರತಂಡ.
The post ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ನಾಗರಹಾವು ಚಿತ್ರತಂಡದಿಂದ 1,100 ಕೆಜಿ ತೂಕದ ಕೇಕ್ appeared first on Kannada Public tv.