ನವದೆಹಲಿ: ರಿಲಯನ್ಸ್ ಜಿಯೋಗೆ ಸ್ಪರ್ಧೆ ನೀಡುವ ನಿಟ್ಟಿನಲ್ಲಿ ಬಿಎಸ್‍ಎನ್‍ಎಲ್ ತನ್ನ ಬ್ರಾಡ್‍ಬ್ಯಾಂಡ್ ಗ್ರಾಹಕರಿಗೆ ಉಚಿತ ಕರೆ ಮತ್ತು ಅನ್‍ಲಿಮಿಟೆಡ್ ಡೇಟಾ ನೀಡಲು ಮುಂದಾಗಿದೆ.
ತಿಂಗಳಿಗೆ 1199 ರೂ. ಪ್ಲಾನ್ ಅಳವಡಿಸಿದ ಗ್ರಾಹಕರು 2ಎಂಬಿ ಪಿಎಸ್ ವೇಗದಲ್ಲಿ ಡೇಟಾ ಡೌನ್‍ಲೋಡ್ ಮಾಡಬಹುದು ಅಷ್ಟೇ ಅಲ್ಲೇ ಯಾವುದೇ ನೆಟ್‍ವರ್ಕ್ ಕಂಪೆನಿಯ ಗ್ರಾಹಕರಿಗೆ ಎಷ್ಟು ಬೇಕಾದರೂ ಸ್ಥಳೀಯ ಮತ್ತು ಎಸ್‍ಟಿಡಿ ಕರೆಗಳನ್ನು ಉಚಿತವಾಗಿ ಮಾಡಬಹುದು ಎಂದು ಬಿಎಸ್‍ಎನ್‍ಎಲ್ ತಿಳಿಸಿದೆ.
ಇತ್ತಿಚೆಗಷ್ಟೇ ಏರ್‍ಟೆಲ್ ತನ್ನ ಡೇಟಾ ದರದಲ್ಲಿ ಇಳಿಕೆ ಮಾಡಿತ್ತು. ಜಿಯೋ ಸೇವೆ ಆರಂಭಗೊಂಡ ಬಳಿಕ ಟೆಲಿಕಾಂ ಕಂಪೆನಿಗಳು ಈಗ ಡೇಟಾ ನೀಡುವುದರಲ್ಲಿ ದರ ಸಮರವನ್ನು ಆರಂಭಿಸಿದೆ.
ಇದನ್ನೂ ಓದಿ: ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ? ಇಲ್ಲಿದೆ ಪೂರ್ಣ ಮಾಹಿತಿ
The post ಗ್ರಾಹಕರಿಗೆ ಬಿಎಸ್‍ಎನ್‍ಎಲ್ ಗಿಫ್ಟ್: ಅನ್‍ಲಿಮಿಟೆಡ್ ಡೇಟಾ,ಕಾಲ್ ಫ್ರೀ appeared first on Kannada Public tv.