ನವದೆಹಲಿ: ಐಫೋನ್ 7 ಅಕ್ಟೋಬರ್‍ನಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ಐಫೋನ್ 6 ಎಸ್ ಮತ್ತು 6ಎಸ್ ಪ್ಲಸ್ ಬೆಲೆಯಲ್ಲಿ ದಿಢೀರ್ ಇಳಿಕೆಯಾಗಿದೆ.
128 ಜಿಬಿ ಆಂತರಿಕ ಮೆಮೊರಿಯ ಐಫೋನ್ 6ಎಸ್ ಮತ್ತು 6ಎಸ್ ಪ್ಲಸ್ ಬೆಲೆ 22 ಸಾವಿರ ರೂ. ಕಡಿಮೆಯಾಗಿದೆ. 128 ಜಿಬಿ ಐಫೋನ್ 6ಎಸ್ ಬೆಲೆ 82 ಸಾವಿರ ರೂ. ಇದ್ದರೆ ಈಗ 60 ಸಾವಿರ ರೂ. ಆಗಿದೆ. ಐಫೋನ್ 6ಎಸ್ ಪ್ಲಸ್ ಹಿಂದೆ 92 ಸಾವಿರ ರೂ. ಮಾರಾಟವಾಗುತ್ತಿದ್ದರೆ ಈಗ 70 ಸಾವಿರ ಆಗಿದೆ.
ಈ ತಿಂಗಳ ಮಾರ್ಚ್‍ನಲ್ಲಿ ಬಿಡುಗಡೆಯಾಗಿದ್ದ ಐಫೋನ್ ಎಸ್‍ಇ ಫೋನಿನ ಬೆಲೆ 5 ಸಾವಿರ ರೂ. ಕಡಿಮೆಯಾಗಿದೆ. 64 ಜಿಬಿ ಆಂತರಿಕ ಮೆಮೊರಿಯ ಫೋನ್ 49 ಸಾವಿರ ರೂ. ಬೆಲೆಯಲ್ಲಿ ಆರಂಭದಲ್ಲಿ ಮಾರಾಟವಾಗುತಿತ್ತು. ಆದರೆ ಈಗ ಈ ಫೋನಿಗೆ 44 ಸಾವಿರ ಬೆಲೆಯನ್ನು ಆಪಲ್ ನಿಗದಿ ಮಾಡಿದೆ.
2016ರ ಎರಡನೇ ತ್ರೈಮಾಸಿಕದಲ್ಲಿ ವಿಶ್ವದಲ್ಲಿ 85 ಲಕ್ಷ ಐಫೋನ್ 6ಎಸ್ ಮಾರಾಟವಾಗಿದೆ. ಐಫೋನ್ 7 ಮತ್ತು ಐಫೋನ್ 7 ಪ್ಲಸ್ ಅಕ್ಟೋಬರ್ 7ರಂದು ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.
The post ಐಫೋನ್ 6 ಬೆಲೆ 22 ಸಾವಿರ ರೂ. ದಿಢೀರ್ ಇಳಿಕೆ appeared first on Kannada Public tv.