ಬೆಂಗಳೂರು: ಮಗುವನ್ನ ಆಕೆಯ ತಾಯಿಯೇ ಬಿಟ್ಟುಹೋಗಿರುವಂತಹ ಕರುಣಾಜನಕ ಘಟನೆ ನಗರದ ಯಶವಂತಪುರದ ಹೆರಿಗೆ ಆಸ್ಪತ್ರೆಯ ಪಕ್ಕದಲ್ಲಿ ನಡೆದಿದೆ.
ಯಶವಂತಪುರದ ಹೆರಿಗೆ ಆಸ್ಪತ್ರೆ ಪಕ್ಕದಲ್ಲಿ ನವಜಾತ ಶಿಶು ಪತ್ತೆ ಯಾಗಿದ್ದು, ಹೆಣ್ಣು ಮಗುವೆಂಬ ಕಾರಣಕ್ಕೆ ಹೆತ್ತ ತಾಯಿಯೇ ಕಂದಮ್ಮನನ್ನ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದ್ದು, ಮಗುವಿನ ಸ್ಥಿತಿ ಗಂಭೀರವಾಗಿದೆ.
ಏಳು ತಿಂಗಳಿನ ನವಜಾತ ಶಿಶು ಉಸಿರಾಡುತ್ತಿದೆ ಎಂದು ತಿಳಿದ ಜನ ಹೆರಿಗೆ ಆಸ್ಪತ್ರೆಯಲ್ಲಿ ಮಗುವಿಗೆ ಆಮ್ಲಜನಕ ಕೊಟ್ಟು ಚಿಕಿತ್ಸೆ ನೀಡಲಾಗಿದೆ. ಆದರೆ ಅದರ ಸ್ಥಿತಿ ಗಂಭೀರವಾಗಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ಮೂಲಕ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.
The post ರಸ್ತೆಯಲ್ಲೇ ಮಗು ಬಿಟ್ಟು ಹೋದ ತಾಯಿ: ಮಗುವಿನ ಸ್ಥಿತಿ ಗಂಭೀರ appeared first on Kannada Public tv.