ಬೀದರ್: ಬುಧವಾರದಿಂದ ಬೀದರ್, ರಾಯಚೂರು, ಕಲಬುರುಗಿ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಹಿಂಗಾರು ಮಳೆ ಆರ್ಭಟಿಸುತ್ತಿದೆ ಸೇತುವೆ ಮುಳುಗಡೆಯಾಗಿ ರೋಗಿಯೋರ್ವ ಪರದಾಡಿದ ಘಟನೆ ಬೀದರ್‍ನ ಸೇಡೋಳ ಗ್ರಾಮದಲ್ಲಿ ನಡೆದಿದೆ.
ವಿದ್ಯುತ್ ತಂತಿ ತಗುಲಿ ಗಂಭೀರ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಯ್ತು. ರಾತ್ರಿಯಿಡೀ ಮಳೆ ಸುರಿದ ಪರಿಣಾಮ ಸೇತುವೆ ಮುಳುಗಡೆಯಾದ ಪರಿಣಾಮ ಗ್ರಾಮಕ್ಕೆ ಬರಲಾಗದೇ ಜನರು ಪರದಾಡಿದ್ರು.
ಮಾಂಜ್ರಾ ನದಿಗೆ ಹೊಂದಿಕೊಂಡಿರುವ ಈ ಸೇತುವೆ ಆಗಾಗ ಮುಳುಗಡೆಯಾಗ್ತಿತ್ತು. ಆದ್ರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರದ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ ಬೀದರ್‍ನಿಂದ ತೆಲಂಗಾಣಕ್ಕೆ ಸಂಚರಿಸೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಕಳೆದ ರಾತ್ರಿಯಿಂದ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ರೈಲ್ವೇ ಹಳಿ ಮೇಲೆ ಮಣ್ಣು ಶೇಖರಣೆ ಆಗಿದೆ. ಅಲ್ಲದೇ ಮಣ್ಣಿನೊಂದಿಗೆ ಜಲ್ಲಿಕಲ್ಲು ಕೊಚ್ಚಿಹೋದ ಹಿನ್ನೆಲೆ ತಾತ್ಕಾಲಿಕವಾಗಿ ರೈಲ್ವೇ ಸಂಚಾರ ಬಂದ್ ಮಾಡಲಾಗಿದೆ.
The post ಬೀದರ್, ಕಲಬುರಗಿಯಲ್ಲಿ ಹಿಂಗಾರು ಅಬ್ಬರ: ಸೇತುವೆ ಮುಳುಗಡೆಯಿಂದ ಜನಜೀವನ ತತ್ತರ appeared first on Kannada Public tv.