ಬೆಂಗಳೂರು: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆಜೆ ಜಾರ್ಜ್‍ಗೆ ಕ್ಲೀನ್ ಚೀಟ್ ಭಾಗ್ಯ ಶೀಘ್ರದಲ್ಲೇ ಸಿಗಲಿದೆ. ಜಾರ್ಜ್‍ಗೆ ಕ್ಲೀನ್ ಚಿಟ್ ನೀಡಲು ಅಖಾಡ ರೆಡಿಯಾಗಿದ್ದು, ಈ ಸಂಬಂಧ ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಸೆ. 19ರಂದು ಮಡಿಕೇರಿ ನ್ಯಾಯಾಲಯಕ್ಕೆ ಸಿಐಡಿ ಬಿ ರಿಪೋರ್ಟ್ ಸಲ್ಲಿಸಲಿದ್ದು, ಈಗಾಗಲೇ ಬಿ ರಿಪೋರ್ಟ್ ಕರಡು ಪ್ರತಿ ಕಾನೂನು ವಿಭಾಗಕ್ಕೆ ರವಾನೆಯಾಗಿದೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಹಿರಿಯ ಅಧಿಕಾರಿಗಳಿಂದಲೂ ಬಿ. ರಿಪೋರ್ಟ್ ಕರಡು ಪ್ರತಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಜಾರ್ಜ್ ಸೇರಿದಂತೆ ಪ್ರಕರಣದ ಆರೋಪಿಗಳಾದ ಎಡಿಜಿಪಿ ಎ.ಎಂ. ಪ್ರಸಾದ್, ಐಜಿಪಿ ಪ್ರಣವ್ ಮೊಹಾಂತಿಗೂ ಕ್ಲೀನ್‍ಚಿಟ್ ಸಿಕ್ಕಿದೆ. ಸೆ.19 ರಂದು ಈ ಪ್ರಕರಣದ ವಿಚಾರಣೆಯನ್ನು ಮಡಿಕೇರಿ ಕೋರ್ಟ್ ಕಾಯ್ದಿರಿಸಿದ್ದು ಅಂದೇ ಸಿಐಡಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದಸರೆ ವೇಳೆ ಮಂತ್ರಿಭಾಗ್ಯ: ಕ್ಲೀನ್ ಚಿಟ್ ಸಿಗುತ್ತಿದ್ದಂತೆ ಜಾರ್ಜ್‍ಗೆ ಮಂತ್ರಿಗಿರಿ ನೀಡಲು ಹೈಕಮಾಂಡ್‍ನಿಂದಲೂ ಅಸ್ತು ಎಂದಿದ್ದು ಬೆಂಗಳೂರು ಅಭಿವೃದ್ಧಿ ಖಾತೆಯನ್ನೇ ಜಾರ್ಜ್‍ಗೆ ನೀಡಲು ಸಹ ಒಪ್ಪಿಗೆ ನೀಡಿದೆ. ದಸರೆಯ ಹೊತ್ತಿಗೆ ಸಿದ್ದರಾಮಯ್ಯ ಅವರ ಕ್ಯಾಬಿನೆಟ್‍ಗೆ ಜಾರ್ಜ್ ಮರಳಿ ಸೇರುವುದು ಬಹುತೇಕ ಖಚಿತವಾಗಿದೆ.
ಪೋಸ್ಟಿಂಗ್ ಭಾಗ್ಯ: ಬಿ. ರಿಪೋರ್ಟ್ ಸಲ್ಲಿಸುತ್ತಿರುವ ತನಿಖಾಧಿಕಾರಿಗಳು, ಸಹಕರಿಸಿದವರಿಗೆ ಬಂಪರ್ ಬಹುಮಾನ ಸಿಕ್ಕಿದ್ದು, ಈ ತನಿಖೆಯಲ್ಲಿ ಜಾರ್ಜ್‍ಗೆ ಸಹಕರಿಸಿರುವ ಎಲ್ಲ ಅಧಿಕಾರಿಗಳಿಗೆ ಜನವರಿ ನಂತರ ಸಿಗಲಿದೆ ಒಳ್ಳೆ ಪೋಸ್ಟಿಂಗ್ ಸಿಗುವ ಸಾಧ್ಯತೆಯಿದೆ.
ಸಿಬಿಐ ತನಿಖೆ: ಬಿ ರಿಪೋರ್ಟ್ ಪ್ರಶ್ನಿಸಿ ಗಣಪತಿ ಕುಟುಂಬ ಮೇಲ್ಮನವಿ ಸಲ್ಲಿಸಿ, ಸಿಐಡಿ ಸರಿಯಿಲ್ಲ, ಸಿಬಿಐ ತನಿಖೆಗೆ ಆಗ್ರಹಿಸುವಂತೆ ಪಟ್ಟಿ ಹಿಡಿಯುವ ಸಾಧ್ಯತೆಯಿದೆ.
ಏನಿದು ಪ್ರಕರಣ? ಡಿವೈಎಸ್‍ಪಿ ಗಣಪತಿ ಮಡಿಕೇರಿ ಲಾಡ್ಜ್ ಒಂದರಲ್ಲಿ ಜುಲೈ 7ರಂದು ಆತ್ಮಹತ್ಯೆಗೆ ಶರಣಾಗಿದ್ದರು. ನೇಣಿಗೆ ಶರಣಾಗುವ ಮುನ್ನ ಸ್ಥಳೀಯ ವಾಹಿನಿಗೆ ಸಂದರ್ಶನ ನೀಡಿ ಮುಂದೆ ನನಗೆ ಏನಾದರೂ ಆದರೆ ಅದಕ್ಕೆ ಕೆಜೆ ಜಾರ್ಜ್, ಗುಪ್ತಚರ ವಿಭಾಗದ ಎಡಿಜಿಪಿ ಎ.ಎಂ. ಪ್ರಸಾದ್, ಲೋಕಾಯುಕ್ತ ಐಜಿಪಿ ಪ್ರಣವ್ ಮೊಹಂತಿ ಕಾರಣ ಎಂದು ನೇರವಾಗಿ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಅಧಿಕಾರಿಗಳ ಕಿರುಕುಳವನ್ನು ಎಳೆಎಳೆಯಾಗಿ ವಿವರಿಸಿದ್ದರು. ಪೊಲೀಸರು ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದರೂ ಆ ಎಫ್‍ಐಆರ್‍ನಲ್ಲಿ ಜಾರ್ಜ್, ಇಬ್ಬರು ಪೊಲೀಸ್ ಅಧಿಕಾರಿಗಳ ಹೆಸರು ಇರಲಿಲ್ಲ. ಹೀಗಾಗಿ ಗಣಪತಿ ಅವರ ಪುತ್ರ ನೇಹಾಲ್ ಮೂವರ ಮೇಲೆ ಎಫ್‍ಐಆರ್ ಸಲ್ಲಿಸುವಂತೆ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಮಡಿಕೇರಿ ಕೋರ್ಟ್ ಜಾರ್ಜ್ ಸೇರಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಆದೇಶ ನೀಡಿತ್ತು. ಎಫ್‍ಐಆರ್ ದಾಖಲಾದ ಬಳಿಕ ಜಾರ್ಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
The post ಗಣಪತಿ ಕೇಸ್: ಕೆಜೆ ಜಾರ್ಜ್‍ಗೆ ಕ್ಲೀನ್ ಚೀಟ್ ಭಾಗ್ಯ? appeared first on Kannada Public tv.