ತುಮಕೂರು: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿಕೊಂಡು ಸತ್ತ ನಾಯಿ, ಪರೋಕ್ಷವಾಗಿ ಇಬ್ಬರ ಪ್ರಾಣ ಉಳಿಸಿದೆ.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ತಿಪ್ಪೂರಿನ ಗೀತಾ ಮತ್ತು ಮಲ್ಲಿಕಾರ್ಜುನ್ ಎಂಬವರ ಮನೆಯ ಚುಂಚ ಹೆಸರಿನ ನಾಯಿ ಗ್ರಾಮದ ಕೆಂಪಮ್ಮ ಮತ್ತು ಆಕೆಯ ಮೊಮ್ಮಗನ ಪ್ರಾಣ ಉಳಿಸಿದೆ. ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗೀತಾ ಅವರ ಮನೆಯ ಪಕ್ಕ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಅದೇ ಮಾರ್ಗವಾಗಿ ಕೆಂಪಮ್ಮ ತನ್ನ ಮೊಮ್ಮಗನನ್ನು ಆಟವಾಡಿಸುತ್ತ ಬರುತ್ತಿದ್ದರು. ಇದನ್ನು ಗಮನಿಸಿದ ನಾಯಿ ಬೊಗಳಿದೆ. ಆದರೂ ಕೆಂಪಮ್ಮ ಮುಂದೆ ಬಂದಾಗ, ನಾಯಿ ವಿದ್ಯುತ್ ತಂತಿಯನ್ನು ಬಾಯಿಯಲ್ಲಿ ಕಚ್ಚಿದ್ದು, ಕೂಡಲೇ ಶಾಕ್‍ನಿಂದ ಪ್ರಾಣ ಬಿಟ್ಟಿದೆ. ಆಗ ಕೆಂಪಮ್ಮ ಗಾಬರಿಯಾಗಿ ಅಲ್ಲೇ ನಿಂತಿದ್ದು, ನಾಯಿಯ ಸಮಯ ಪ್ರಜ್ಞೆಯಿಂದ ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಾಯಿಯ ತ್ಯಾಗ ಕಂಡು ಗ್ರಾಮದ ಜನ ಮಮ್ಮಲ ಮರುಗಿದ್ದು, ಅದರ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
The post ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿ ಇಬ್ಬರ ಪ್ರಾಣ ಉಳಿಸಿ ಮೃತಪಟ್ಟ ನಾಯಿ appeared first on Kannada Public tv.