ನವದೆಹಲಿ: ಈ ತಿಂಗಳಿನಲ್ಲೇ ಭಾರತದ ಮಾರುಕಟ್ಟೆ ಮೋಟೋ ಇ3 ಸ್ಮಾರ್ಟ್‍ಫೋನ್ ಬರಲಿದೆ. ಸೆಪ್ಟೆಂಬರ್ 19 ರಂದು ಈ ಸ್ಮಾರ್ಟ್‍ಫೋನನ್ನು ಲೆನೊವೊ ಕಂಪೆನಿ ಬಿಡುಗಡೆ ಮಾಡಲಿದೆ ಎಂದು ಟೆಕ್ ಮಾಧ್ಯಮವೊಂದು ವರದಿ ಮಾಡಿದೆ.
ಜುಲೈ ತಿಂಗಳಿನಲ್ಲಿ ಈ ಫೋನ್ ಚೀನಾದಲ್ಲಿ ಬಿಡುಗಡೆಯಾಗಿದ್ದು ಈ ಫೋನ್‍ಗೆ 7 ಸಾವಿರ ರೂ. ಒಳಗಡೆ ದರ ನಿಗದಿಯಾಗುವ ಸಾಧ್ಯತೆಯಿದೆ. ಒಟ್ಟು 2 ಅಂತರಿಕ ಮೆಮೊರಿಯಲ್ಲಿ ಈ ಫೋನ್ ಬಿಡುಗಡೆಯಾಗಲಿದ್ದು, 1ಜಿಬಿ ರಾಮ್ 8 ಜಿಬಿ ಆಂತರಿಕ ಮೆಮೊರಿ ಹೊಂದಿದ್ದರೆ, 16 ಜಿಬಿ ಆಂತರಿಕ ಮೆಮೊರಿಯ ಫೋನ್ 2 ಜಿಬಿ ರಾಮ್ ಹೊಂದಿರಲಿದೆ.
ಮಾರ್ಶ್‍ಮೆಲೋ ಆಪರೇಟಿಂಗ್ ಸಿಸ್ಟಂ ಒಳಗೊಂಡಿದ್ದು ನಿಮಗೆ ಪ್ಯೂರ್ ಆಂಡ್ರಾಯ್ಡ್ ಓಎಸ್‍ನ ಅನುಭವ ಸಿಗುತ್ತದೆ. ಅಷ್ಟೇ ಅಲ್ಲದೇ ಬೇಗನೇ ಆಂಡ್ರಾಯ್ಡ್ ಅಪ್‍ಡೇಟ್ ಸಿಗುತ್ತದೆ.
1 ಜಿಬಿ ರಾಮ್ ಹೊಂದಿರುವ ಫೋನ್ 2800 ಎಂಎಎಚ್ ಬ್ಯಾಟರಿ ಹೊಂದಿದ್ದರೆ, 2ಜಿಬಿ ರಾಮ್ ಹೊಂದಿರುವ ಫೋನ್ 3500 ಎಂಎಎಚ್ ಬ್ಯಾಟರಿ ಹೊಂದಿದೆ. ಆದರೂ 2 ಜಿಬಿ ರಾಮ್ ಹೊಂದಿರುವ ಫೋನಿನ ಗುಣ ವೈಶಿಷ್ಟ್ಯದ ಬಗ್ಗೆ ಲೆನೆವೊದಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಇದರ ಜೊತೆ ಸೆ.19ರಂದೇ ಮೋಟೋ ಜಿ4 ಫೋನಿನ ಮಾರಾಟವನ್ನು ದೇಶದಲ್ಲಿ ಆರಂಭಿಸಲಿದೆ.
ಡ್ಯುಯಲ್ ಸಿಮ್ ಹೈ ಬ್ರಿಡ್ ಫೋನ್ ಇದಾಗಿದ್ದು, ಎರಡು ಮ್ರೈಕ್ರೋ ಸಿಮ್ ಹಾಕಬಹುದು ಅಥವಾ ಒಂದು ಮೈಕ್ರೋ ಸಿಮ್, ಒಂದು ಎಸ್‍ಡಿ ಕಾರ್ಡ್ ಹಾಕಬಹುದು. ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಈ ಫೋನ್ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.
ಪ್ಯೂರ್ ಓಎಸ್ ಲಾಭ ಏನು?: ವಿವಿಧ ಕಂಪೆನಿಗಳು ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಿದರೂ ಅವುಗಳ ಓಎಸ್‍ನಲ್ಲಿ ಗೂಗಲ್‍ನ ಶುದ್ಧ ಆಂಡ್ರಾಯ್ಡ್ ಇರುವುದಿಲ್ಲ. ಈ ಓಎಸ್‍ಗೆ ಅವರದ್ದೇ ಆದ ಕೆಲ ವಿಶೇಷತೆಗಳನ್ನು ಸೇರಿಸಿ ಫೋನ್ ಬಿಡುಗಡೆ ಮಾಡುತ್ತವೆ. ಹೀಗಾಗಿ ಗೂಗಲ್ ಹೊಸ ಆಂಡ್ರಾಯ್ಡ್ ಬಿಡುಗಡೆ ಮಾಡಿದ ತಕ್ಷಣವೇ ಈ ಫೋನ್‍ಗಳಿಗೆ ಅಪ್‍ಡೇಟ್ ಸಿಗುವುದಿಲ್ಲ. ಆದರೆ ನೆಕ್ಸಸ್ ಮತ್ತು ಮೋಟೋ ಫೋನ್‍ಗಳಲ್ಲಿ ಪ್ಯೂರ್ ಆಂಡ್ರಾಯ್ಡ್ ಇರುತ್ತದೆ. ಈ ಕಾರಣಕ್ಕೆ ಈ ಎರಡು ಫೋನ್ ಹೊಂದಿರುವ ಗ್ರಾಹಕರಿಗೆ ಬೇಗನೇ ಓಎಸ್ ಅಪ್‍ಡೇಟ್ ಸಿಗುತ್ತದೆ.
ಇದನ್ನೂ ಓದಿ:ಜಿಯೋದ ಮಾರುಕಟ್ಟೆ ತಂತ್ರವೇನು? ಗ್ರಾಹಕನಿಗೆ ಲಾಭವಾಗುತ್ತಾ? ಪೋರ್ಟ್ ಮಾಡೋ ಮುನ್ನ ಈ ಸುದ್ದಿ ಓದಿ
ಮೋಟೋ ಇ3
ಗುಣವೈಶಿಷ್ಟ್ಯಗಳು
ಡ್ಯುಯಲ್ ಸಿಮ್(ಹೈಬ್ರಿಡ್ ಫೋನ್)
5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(750*1280 ಪಿಕ್ಸೆಲ್,294 ಪಿಪಿಐ,ಕಾರ್ನಿಂಗ್ ಗೊರಿಲ್ಲ ಗ್ಲಾಸ್)
ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೊ ಓಎಸ್
ಕ್ವಾಲಕಂ ಸ್ನಾಪ್ ಡ್ರಾಗನ್ 1.5 Ghz ಕ್ವಾಡ್ ಕೋರ್ ಪ್ರೊಸೆಸರ್
8 ಎಂಪಿ ಹಿಂದುಗಡೆ ಕ್ಯಾಮೆರಾ
5 ಎಂಪಿ ಮುಂದುಗಡೆ ಕ್ಯಾಮೆರಾ
8ಜಿಬಿ ಆಂತರಿಕ ಮೆಮೊರಿ
1 ಜಿಬಿ ರಾಮ್
32 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
2800 ಎಂಎಎಚ್ ತೆಗೆಯಲು ಸಾಧ್ಯವಿಲ್ಲದ ಬ್ಯಾಟರಿ
The post ಸೆ.19ಕ್ಕೆ ಕಡಿಮೆ ಬೆಲೆಯ ಪ್ಯೂರ್ ಆಂಡ್ರಾಯ್ಡ್ ಫೋನ್ ಭಾರತದಲ್ಲಿ ಬಿಡುಗಡೆ appeared first on Kannada Public tv.