ರಾಯಚೂರು: ಬಿಸಿಲನಾಡು ರಾಯಚೂರಿನ ಜನರು ಸ್ವಲ್ಪ ಹಾಯಾಗಿ ತಣ್ಣಗಿರಲಿ ಅಂತ ಉದ್ಯಾನವನವನ್ನ ನಿರ್ಮಿಸಲಾಗಿತ್ತು. ಆದ್ರೀಗ ಆ ಉದ್ಯಾನವನಗೆಲ್ಲಾ ಎಲ್ಲಿದೆ ಅಂತ ಹುಡುಕೋ ಪರಿಸ್ಥಿತಿಯಲ್ಲಿದೆ.
ರಾಯಚೂರು ನಗರಸಭೆಯ 17 ನೇ ವಾರ್ಡ್‍ನಲ್ಲಿರುವ ಜಾಗ ಉದ್ಯಾನವನ ಅನ್ನೋದು ಇಲ್ಲಿನ ಎಷ್ಟೋ ನಿವಾಸಿಗಳಿಗೆ ಗೊತ್ತಿಲ್ಲ. ಹಂತ ಹಂತವಾಗಿ ಒತ್ತುವರಿಯಾಗುತ್ತಿದ್ದ 17, 500 ಚದರಡಿಯ ಉದ್ಯಾನವನವನ್ನು ಉಳಿಸೋಕೆ ಇಲ್ಲಿನ ನಗರಸಭೆ ಸದಸ್ಯೆ ಆಶಾಬೀ ಇದ್ದ ಅನುದಾನದಲ್ಲಿ ಕಾಂಪೌಂಡ್‍ಗೆ ಬುನಾದಿ ಹಾಕಿ ತಾತ್ಕಲಿಕ ವ್ಯವಸ್ಥೆ ಮಾಡಿದ್ದಾರೆ. ಇದ್ರಿಂದಾಗಿ ಒತ್ತುವರಿಕೋರರಿಂದ ರಕ್ಷಣೆ ಸಿಕ್ಕಿದೆ. ಆದ್ರೆ ಉಪಯೋಗಕ್ಕೆ ಮಾತ್ರ ಬಾರದಂತಿದೆ. ಇಲ್ಲಿನ ವೆಂಕಟೇಶ್ವರ ನಗರದಲ್ಲಿರುವ 840 ಚದರ ಮೀಟರ್ ವಿಸ್ತೀರ್ಣದ ಮತ್ತೊಂದು ಪಾರ್ಕ್‍ನ ಪರಸ್ಥಿತಿಯೂ ಬೇರೆಯಾಗಿಲ್ಲ. ಸುಮಾರು 5 ಸಾವಿರ ಜನರಿರುವ 17ನೇ ವಾರ್ಡ್‍ನ ನಿವಾಸಿಗಳು ಉದ್ಯಾನವನಗಳು ಇದ್ದರೂ ಬಳಸಿಕೊಳ್ಳದ ಸ್ಥಿತಿಯಲ್ಲಿದ್ದಾರೆ.
ಹೀಗಾಗಿ ಇಲ್ಲಿನ ಸಾರ್ವಜನಿಕರು ಪಬ್ಲಿಕ್ ಟಿವಿ ಸಹಯೋಗದೊಂದಿಗೆ ತಮ್ಮ ಉದ್ಯಾನವನಗಳನ್ನ ತಾವೇ ಸುಂದರವಾಗಿ ನಿರ್ಮಿಸಿಕೊಳ್ಳಲು ಈಗ ಉತ್ಸಾಹ ತೋರುತ್ತಿದ್ದಾರೆ. ಸಿಂಧನೂರಿನ ರೋಟರಿ ಕ್ಲಬ್ ಹಾಗೂ ಶ್ರೀಕೃಷ್ಣದೇವರಾಯ ಶಿಕ್ಷಣಸಂಸ್ಥೆ ತಲಾ ಒಂದು ಉದ್ಯಾನವನವನ್ನ ದತ್ತು ತೆಗೆದುಕೊಳ್ಳಲು ಮುಂದೆ ಬಂದಿವೆ. ಸಿಂಧನೂರು ನಗರದಲ್ಲಿ ಎರಡು ಉದ್ಯಾನವಗಳನ್ನ ಸುಂದರ ಹಾಗೂ ಮಾದರಿ ಉದ್ಯಾನವನಗಳಾಗಿ ನಿರ್ಮಾಣ ಮಾಡಲು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಪಬ್ಲಿಕ್ ಟಿವಿ ಪಣತೊಟ್ಟಿದೆ. ಗಿಡ ಬೆಳೆಸಿ ನಾಡು ಉಳಿಸಿ ಉದ್ಯಾನವನಗಳನ್ನ ಅಭಿವೃದ್ದಿಪಡಿಸಿ ಅನ್ನೋದಷ್ಟೇ ನಮ್ಮ ಆಶಯ.
The post ಉದ್ಯಾನವನಗಳನ್ನ ತಾವೇ ಮರುನಿರ್ಮಾಣ ಮಾಡಲು ಹೊರಟಿದ್ದಾರೆ ರಾಯಚೂರಿನ ಜನ appeared first on Kannada Public tv.