ತುಮಕೂರು: ಎರಡೂ ಕೈಗಳು ಇಲ್ಲದಿದ್ರೂ ಹೊಲ ಊಳುವ ಮೂಲಕ ಸಾವಿರಾರು ರೈತರಿಗೆ ಮಾದರಿಯಾಗಿದ್ರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ರೈತ ನಂಜುಂಡಪ್ಪ. ಇಬ್ಬರು ಮ್ಕಕಳ ವಿದ್ಯಾಭ್ಯಾಸದ ಜೊತೆಗೆ ಮನೆ ಜವಾಬ್ದಾರಿ ನಿಭಾಯಿಸ್ತಿದ್ದ ನಂಜುಂಡಪ್ಪನಿಗೆ ಸರಿಯಾದ ಸೂರು ಇರಲಿಲ್ಲ.
ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದ ರೈತ ನಂಜುಂಡಪ್ಪಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಲಾಗಿತ್ತು. ಅದರಂತೆ ಕುಣಿಗಲ್‍ನ ರಾಜೇಶ್ ಎಂಬವರು, ನಂಜುಂಡಪ್ಪ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇನ್ನೊಂದೆರಡು ತಿಂಗಳೊಳಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ತನ್ನ ಕನಸು ನನಸಾಗುತ್ತಿರುವುದು ನಂಜುಂಡಪ್ಪ ಅವರಿಗೂ ಸಂತಸ ತಂದಿದೆ.
ಕೈ ಕಾಲು ಸರಿ ಇದ್ದೂ, ದುಡಿಯೋಕೆ ಜಮೀನಿದ್ರೂ ಸಾಲ ಇದೆ ಅನ್ನೋ ಕಾರಣಕ್ಕೆ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ. ಆದ್ರೆ ಕೈಗಳು ಇಲ್ಲದಿದ್ರೂ ಕೃಷಿಕನಾಗಿ ಕಷ್ಟಪಟ್ಟು ಬದುಕ್ತಿರೋ ಮಾದರಿ ನಂಜುಂಡಪ್ಪಗೆ ಸಹಾಯ ಮಾಡಿದ ದಾನಿ ರಾಜೇಶ್‍ಗೆ ಬೆಳಕು ಕಾರ್ಯಕ್ರಮದ ಪರವಾಗಿ ಧನ್ಯವಾದ.
The post ಎರಡೂ ಕೈಗಳಿಲ್ಲದಿದ್ರೂ ಹೊಲ ಊಳುವ ಮಾದರಿ ರೈತನಿಗೆ ಸಿಕ್ತಿದೆ ಸೂರು appeared first on Kannada Public tv.