ಮುಂಬೈ: ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಆತ್ಮಕಥನಾ ಚಿತ್ರವಾಗಿ ಬರುತ್ತಿರುವುದು ಗೊತ್ತಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ತುಂಬಾನೇ ಸುದ್ದಿಯಾಗಿದೆ.
ಸಚಿನ್ ಎ ಬಿಲಿಯನ್ ಡ್ರೀಮ್ಸ್ ಟೈಟಲ್‍ನಲ್ಲಿ ಬರುತ್ತಿರುವ ಸಚಿನ್ ಅವರ ಆತ್ಮಕಥನದಲ್ಲಿ ಖುದ್ದು ಸಚಿನ್ ಅವರೇ ನಟಿಸಿದ್ದಾರೆ. ಈ ಮೂಲಕ ಬೆಳ್ಳಿತೆರೆಗೆ ಸಚಿನ್ ಪಾದಾರ್ಪಣೆ ಮಾಡಿದ್ದಾರೆ. ಟೀಸರ್‍ನಲ್ಲಿ ಮೈದಾನದಲ್ಲಿ ಸಚಿನ್ ತೆಂಡೂಲ್ಕರ್ ಆಗಿ ಕಾಣಿಸಿಕೊಳ್ಳುವುದಕ್ಕೂ ಮೊದಲಿನ ಜೀವನ ಹೇಗಿತ್ತು ಎನ್ನುವ ದೃಶ್ಯಗಳಿದ್ದು, ಬಹಳ ವಿಶೇಷವಾಗಿ ಸಚಿನ್ ಬಾಲ್ಯವನ್ನ ತೋರಿಸಲಾಗಿದೆ.
ಇದಲ್ಲದೇ 55ಡೇಸ್ ದಿ ಟ್ರೈನಿಂಗ್, ಒನ್ ಪೇರ್ ಆಫ್ ಟ್ರಸರ್ಸ್, ದಿ ಸಚಿನ್ ಸ್ಟೋರಿ ಆಧರಿತ ಲೇಖನಿಯಿದ್ದ ಪೋಸ್ಟರ್‍ಗಳನ್ನು ಈ ಹಿಂದೆಯೇ ಚಿತ್ರತಂಡ ಬಿಡುಗಡೆ ಮಾಡಲಾಗಿತ್ತು. ಮುಂಬೈ ಮೂಲದ 200ನಾಟ್‍ಔಟ್ ಪ್ರೊಡಕ್ಷನ್‍ನಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
A journey made special by your support and wishes. Presenting the teaser of @SachinTheFilm https://t.co/MqJ91UoKUb #SachinTeaser
— sachin tendulkar (@sachin_rt) April 14, 2016
ಸಚಿನ್ ಟೀಸರ್ ಈಗ ದೇಶದಲ್ಲೇ ನಂಬರ್ ಒನ್ ಟ್ರೆಂಡಿಂಗ್ ಟಾಪಿಕ್ ಆಗಿದ್ದು, #SachinTeaser ಹೆಸರಿನಲ್ಲಿ ಜನ ಟ್ವೀಟ್ ಮಾಡುತ್ತಿದ್ದಾರೆ.
The post ಸಚಿನ್ ಆತ್ಮ ಕಥೆ ಟೀಸರ್ ಔಟ್, ಈಗ ವೈರಲ್ appeared first on Public TV.