ಅಹಮದಾಬಾದ್: ಚಿಕಿತ್ಸೆಗೆಂದು ಕರೆತಂದಿದ್ದ ಹಸುವಿನ ಹೊಟ್ಟೆಯಲ್ಲಿ ಅಂದಾಜು 100 ಕೆಜಿ ತ್ಯಾಜ್ಯ ಸಿಕ್ಕಿದ ಘಟನೆ ಅಹಮದಾಬಾದ್‍ನಲ್ಲಿ ನಡೆದಿದೆ. ಇಲ್ಲಿನ ಜೀವದಯಾ ಚಾರಿಟೇಬಲ್ ಟ್ರಸ್ಟ್ ಗೆ ಶುಕ್ರವಾರ ದನವೊಂದನ್ನು ಕರೆ ತಂದಿದ್ದರು.
ತಪಾಸಣೆ ವೇಳೆ ಹಸು ಗರ್ಭಾವಸ್ಥೆಯಲ್ಲಿರುವುದು ತಿಳಿಯಿತು. ಆದರೆ ಹಸು ನಡೆಯಲೂ ಆಗದ ಸ್ಥಿತಿಯಲ್ಲಿತ್ತು. ಈ ಹಿನ್ನೆಲೆಯಲ್ಲಿ ಆಪರೇಷನ್ ಮಾಡಲು ನಿರ್ಧರಿಸಿದರು.
ಅಚ್ಚರಿಯೋ ಅಚ್ಚರಿ: ಆದೇ ಆಪರೇಷನ್ ಮಾಡಲು ಆರಂಭಿಸಿದ ವೈದ್ಯರು ದಂಗಾಗಿ ಹೋದರು. ಕಾರಣ ಅವರಿಗೆ ದನದ ಹೊಟ್ಟೆಯಿಂದ 3 ಬಕೆಟ್ ತ್ಯಾಜ್ಯ ಸಿಕ್ಕಿತ್ತು. ಇದು ಕ್ರಮವಾಗಿ 37 ಕೆಜಿ, 25 ಕೆಜಿ ಹಾಗೂ 36 ಕೆಜಿ ತೂಕವಿತ್ತು ಅಂದ್ರೆ 98 ಕೆಜಿ ಇತ್ತು. ದನದ ಹೊಟ್ಟೆಯಲ್ಲಿ ಪ್ಲಾಸ್ಟಿಕ್, ಕಬ್ಬಿಣದ ಮೊಳೆ, ಸಾಕ್ಸ್ ಗಳು ಸಿಕ್ಕಿದ್ದನ್ನು ನೋಡಿ ವೈದ್ಯರೇ ಅಚ್ಚರಿಪಟ್ಟರು.
ಈ ಹಿಂದೆ ನಮಗೆ ಹಸುವಿನ ಹೊಟ್ಟೆಯಲ್ಲಿ 25-40 ಕೆಜಿ ತ್ಯಾಜ್ಯ ಸಿಕ್ಕಿತ್ತು. ಆದರೆ ಇಷ್ಟೊಂದು ಪ್ರಮಾಣದಲ್ಲಿ ನಮಗೆ ತ್ಯಾಜ್ಯ ಸಿಕ್ಕಿದ್ದು ಇದೇ ಮೊದಲು ಎಂದು ಪಶುವೈದ್ಯ ಕಾರ್ತಿಕ್ ಶಾಸ್ತ್ರಿ ಹೇಳಿದ್ದಾರೆ. ಜನರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಮೂಡಿದರೆ ಮಾತ್ರ ಇದನ್ನು ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.
The post ಹಸುವಿನ ಹೊಟ್ಟೆಯಲ್ಲಿತ್ತು 100 ಕೆಜಿ ತ್ಯಾಜ್ಯ! appeared first on Kannada Public tv.