ನವದೆಹಲಿ: ಈ ಬಾರಿಯ ಶಿಕ್ಷಕರ ದಿನಾಚರಣೆಯಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೇಷ್ಟ್ರಾಗಲಿದ್ದಾರೆ.
ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ಶಾಲೆಯ 11 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 5ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪಾಠ ಮಾಡಲಿದ್ದಾರೆ. ಸುಮಾರು 80 ವಿದ್ಯಾರ್ಥಿಗಳು ರಾಷ್ಟ್ರಪತಿಗಳ ಪಾಠವನ್ನು ಆಲಿಸಲಿದ್ದಾರೆ. ಸೆಪ್ಟೆಂಬರ್ 5ರಂದೇ ದೆಹಲಿಯ ವಿವಿಧ ಸರ್ಕಾರಿ ಶಾಲೆಗಳ ಅಧ್ಯಾಪಕರನ್ನೂ ಪ್ರಣಬ್ ಮುಖರ್ಜಿ ಅವರು ಭೇಟಿಯಾಗಲಿದ್ದಾರೆ.
ರಾಷ್ಟ್ರಪತಿಗಳ ಬೋಧನಾ ಕಾರ್ಯಕ್ರಮ ಸೆಪ್ಟೆಂಬರ್ 5ರಂದು ಡಿಡಿ ನ್ಯೂಸ್ ಹಾಗೂ ಡಿಡಿ ಭಾರತಿ ಚಾನೆಲ್‍ಗಳಲ್ಲಿ ನೇರಪ್ರಸಾರವಾಗಲಿದೆ. ಅಲ್ಲದೆ ರಾಷ್ಟ್ರಪತಿ ಭವನದ ಯೂಟ್ಯೂಬ್ ಚಾನೆಲ್‍ನಲ್ಲೂ ಪಾಠವನ್ನು ನೋಡಬಹುದು.
ಕಳೆದ ವರ್ಷವೂ ಶಿಕ್ಷಕರ ದಿನಾಚರಣೆ ಮುನ್ನಾ ದಿನ ರಾಷ್ಟ್ರಪತಿಗಳು ರಾಜಕೀಯ ಶಾಸ್ತ್ರದ ಉಪನ್ಯಾಸ ನೀಡಿದ್ದರು.
The post ಶಿಕ್ಷಕರ ದಿನಾಚರಣೆಯಂದು ಮೇಷ್ಟ್ರಾಗ್ತಾರೆ ರಾಷ್ಟ್ರಪತಿ ಪ್ರಣಬ್ appeared first on Kannada Public tv.