ಬೆಂಗಳೂರು: ಗೌರಿ ಗಣೇಶ ಹಬ್ಬಕ್ಕೆ ವಿವಿಧ ಊರುಗಳಿಗೆ ಹೋಗೋರಿಗಾಗಿ ಕೆಎಸ್‍ಆರ್‍ಟಿಸಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿದೆ. ಇದರ ಜೊತೆಗೆ ದರ ಏರಿಕೆಯ ಬರೆಯನ್ನು ಹಾಕಿದೆ.
ಹೌದು. ಹಬ್ಬದ ಹಿನ್ನಲೆಯಲ್ಲಿ 1200ರಿಂದ 1300 ಹೆಚ್ಚುವರಿ ಬಸ್‍ಗಳನ್ನು ವ್ಯವಸ್ಥೆ ಮಾಡಿಕೊಂಡಿರುವ ಕೆಎಸ್‍ಆರ್‍ಟಿಸಿ, ಹೆಚ್ಚುವರಿ ಬಸ್‍ಗೆ ಶೇ 10 ರಿಂದ 12ರಷ್ಟು ದರ ಏರಿಕೆ ಮಾಡಿದೆ. ಜನ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ತ ಖಾಸಗಿ ಬಸ್ ದರವೂ ಹಬ್ಬದ ಹಿನ್ನಲೆಯಲ್ಲಿ ಏರಿಕೆ ಕಂಡಿದೆ. ಶುಕ್ರವಾರದಿಂದ ಸೆಪ್ಟೆಂಬರ್ 4 ರವೆಗೆ ಕೆಎಸ್‍ಆರ್‍ಟಿಸಿ ಇ- ಟಿಕೇಟ್ ಬುಕ್ಕಿಂಗ್ ವ್ಯವಸ್ಥೆ ಕೂಡ ಇದ್ದು ಒಬ್ಬರು ನಾಲ್ಕಕ್ಕಿಂತ ಹೆಚ್ಚು ಟಿಕೆಟ್ ಬುಕ್ ಮಾಡಿದ್ರೆ ಅವರಿಗೆ ಶೇ. 5ರಷ್ಟು ರಿಯಾಯಿತಿ ದರವನ್ನು ಪ್ರಕಟಿಸಿದೆ.
The post ಗಣೇಶ ಹಬ್ಬಕ್ಕೆ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿ ಬಸ್; 10- 12% ದರ ಏರಿಕೆ appeared first on Kannada Public tv.