ಮುಂಬೈ: ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸುತ್ತಿರುವ ಜಿಯೋ ಸೇವೆಯನ್ನು ನೀವು ಇ ಕೆವೈಸಿ(ನಿಮ್ಮ ಗ್ರಾಹಕರ ತಿಳಿಯಿರಿ) ಮೂಲಕ ಕೆಲವೇ ನಿಮಿಷಗಳಲ್ಲಿ ಪಡೆಯಬಹುದು.
ಹೌದು. ಇಲ್ಲಿಯವರೆಗೆ ನೀವು ಸೇವಾ ಕಂಪೆನಿಗಳ ಸಿಮ್ ಕಾರ್ಡ್ ಪಡೆದು ಅದು ಕಾರ್ಯಗತಗೊಳ್ಳಬೇಕಾದರೆ ಹಲವು ಗಂಟೆ, ದಿನಗಳು ಬೇಕಿತ್ತು. ಆದರೆ ನೀವು ಜಿಯೋ ಸಿಮ್ ಅನ್ನು ಕೆಲವೇ ನಿಮಿಷಗಳಲ್ಲಿ ಆ್ಯಕ್ಟಿವೇಶನ್ ಮಾಡಿಕೊಳ್ಳಬಹುದು.
ಭಿನ್ನ ಹೇಗೆ?
ಆರು ವರ್ಷಗಳ ಹಿಂದೆ ನೀವು ವೋಟರ್ ಐಡಿ ನೀಡಿದರೆ ಸಿಮ್ ಆಕ್ಟಿವೇಟ್ ಆಗುತಿತ್ತು. ಇದಾದ ಬಳಿಕ ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ನೀಡಿದರೆ ಸಿಮ್ ಆಕ್ಟಿವೇಶನ್ ಆಗಬೇಕಾದರೆ ಕಂಪೆನಿಯ ಕರೆ ಸ್ವೀಕರಿಸಿ ಫೋನ್ ಮೂಲಕ ವೋಟರ್ ಐಡಿ ನಂಬರ್ ಅಥವಾ ಆಧಾರ್ ಕಾರ್ಡ್ ನಂಬರ್ ಅನ್ನು ಒತ್ತಿ ಸಿಮ್ ಕ್ರಿಯಾಶೀಲಗೊಳಿಸಬೇಕಿತ್ತು. ಈಗಲೂ ಇದು ಚಾಲನೆಯಲ್ಲಿದೆ. ಆದರೆ ರಿಲಯನ್ಸ್ ಜಿಯೋ ಸಿಮ್ ಪಡೆಯಲು ಇಷ್ಟೆಲ್ಲ ಕಷ್ಟ ಪಡಬೇಕಿಲ್ಲ. ನೀವು ಆಧಾರ್ ಕಾರ್ಡ್‍ನೊಂದಿಗೆ ನೇರವಾಗಿ ರಿಲಯನ್ಸ್ ಸ್ಟೋರ್‍ಗೆ ಹೋಗಿ ಅಲ್ಲಿರುವ ಸ್ಕ್ಯಾನರ್‍ನಲ್ಲಿ ನೀವು ಕೈ ಬೆರಳನ್ನು ಒತ್ತಿದರೆ ಆಯ್ತು. ನಿಮ್ಮ ಆಧಾರ್ ಕಾರ್ಡ್‍ನಲ್ಲಿರುವ ಬೆಳಚ್ಚಿಗೂ ರಿಲಯನ್ಸ್ ಮಳಿಗೆಯಲ್ಲಿ ಒತ್ತಿದ ಬೆರಳಚ್ಚಿಗೆ ತಾಳೆಯಾದರೆ ಕೆಲವೇ ನಿಮಿಷಗಳಲ್ಲಿ ಸಿಮ್ ಆ್ಯಕ್ಟಿವೇಟ್ ಆಗುತ್ತದೆ.
ಇದನ್ನೂ ಓದಿ: ಜಿಯೋ ಎಫೆಕ್ಟ್; ಏರ್‍ಟೆಲ್ ಡೇಟಾ ಪ್ಯಾಕ್ ದರ ಭಾರೀ ಕಡಿತ
ಆದರೆ ಆರಂಭದಲ್ಲಿ ರಿಲಯನ್ಸ್ ಇ ಕೆವೈಸಿ ಸೇವೆ ದೆಹಲಿ ಮತ್ತು ಮುಂಬೈ ಗ್ರಾಹಕರಿಗೆ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಎಲ್ಲ ನಗರಗಳಲ್ಲಿ ಈ ಸೇವೆ ಆರಂಭಿಸುವುದಾಗಿ ರಿಲಯನ್ಸ್ ಜಿಯೋ ಇನ್ಫೋಕಾಂ ಅಧ್ಯಕ್ಷ ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಆಗಸ್ಟ್ ಮೂರನೇ ವಾರದಲ್ಲಿ ಕೇಂದ್ರ ಸರ್ಕಾರ ಕಾಗದ ರೂಪದಲ್ಲಿರುವ ದಾಖಲೆಗಳ ಪರಿಶೀಲನೆಯ ಬದಲಿಗೆ ಆಧಾರ್ ಮತ್ತು ಬೆರಳುಗುರುತು ನೀಡಿ ಹೊಸ ಸಂಪರ್ಕ ಪಡೆಯುವ ಸಂಬಂಧ ಇ ಕೆವೈಸಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿತ್ತು. ಮುಂದಿನ ದಿನಗಳಲ್ಲಿ ಎಲ್ಲ ಟೆಲಿಕಾಂ ಕಂಪೆನಿಗಳು ಈ ಇ ಕೆವೈಸಿ ಸೇವೆಯನ್ನು ನೀಡಲಿದೆ.
ಇದನ್ನೂ ಓದಿ: ವಿಶ್ವದಲ್ಲೇ ಚೀಪ್; ರಿಲಯನ್ಸ್ 1ಜಿಬಿ 4ಜಿ ಡೇಟಾಗೆ ಕೇವಲ 50 ರೂ
The post ಇ ಕೆವೈಸಿ ಮೂಲಕ ಕೆಲವೇ ನಿಮಿಷಗಳಲ್ಲಿ ಜಿಯೋ ಸಿಮ್ ಆ್ಯಕ್ಟಿವೇಟ್ ಆಗುತ್ತೆ! appeared first on Kannada Public tv.