ಪ್ರೇಗ್: ಆಕಾಶದ ಮೇಲೆ ಸ್ಕೈ ಡೈವರ್ಸ್ ಎತ್ತರದಲ್ಲಿ ಸ್ಟಂಟ್ ಮಾಡೋದನ್ನ ನೋಡಿರುತ್ತೀರಿ. ಆದ್ರೆ ಸ್ಕೈ ಡೈವರ್ ಗುಂಪೊಂದು ಕೊಳವೆ ಒಳಗೆ ಸಖತ್ ಸ್ಟಂಟ್ ಮಾಡಿ ಸಾಹಸ ಮರೆದಿದೆ.
ಹೌದು. ಝೆಕ್ ರಿಪಬ್ಲಿಕ್ ದೇಶದ ಪ್ರೇಗ್‍ನಲ್ಲಿ ಸ್ಕೈ ಡೈವಿಂಗ್ ತಂಡವೊಂದು ಸಖತ್ ಸ್ಟಂಟ್ ಮಾಡಿದೆ. ಸಣ್ಣ ಕೊಳವೆಯ ಒಳಗಡೆ ನಾಲ್ಕು ಮಂದಿ ಸಾಹಸಿಗರು ಒಮ್ಮೆಲೆ ಹೋಗಿ ವಿಭಿನ್ನ ಸ್ಟಂಟ್ ಮಾಡಿದ್ದಾರೆ.
ವೇಗವಾದ ಗಾಳಿಯಲ್ಲಿ ಸಖತ್ತಾಗಿ ಸಾಹಸ ಮಾಡಿದ ನಾಲ್ವರು ಎಲ್ಲೂ ಕೂಡ ಒಬ್ಬರಿಗೊಬ್ಬರು ಡಿಕ್ಕಿ ಹೊಡೆದಿಲ್ಲ. ಇದನ್ನ ನೋಡುತ್ತಿದ್ದ ಜನ ಮಾತ್ರ ಸಾಹಸಿಗರ ಸ್ಟಂಟ್ ನೋಡಿ ತುಂಬಾನೇ ಎಂಜಾಯ್ ಮಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಎತ್ತರದ ಪ್ರದೇಶದಿಂದ ಸ್ಕೈ ಡೈವಿಂಗ್ ಮಾಡಿ ಸಾಹಸಿಗರು ಸಾವನ್ನಪ್ಪುತ್ತಿದ್ದಾರೆ. ಹೀಗಿರುವಾಗ ಕೊಳವೆ ಒಳಗೆ ಸುರಕ್ಷಿತವಾಗಿ ಸಾಹಸ ಮಾಡುವುದೇ ಉಳಿತು ಎಂದು ನೋಡಗರ ಅಭಿಪ್ರಾಯ ಪಟ್ಟಿದ್ದಾರೆ.
The post ಕೊಳವೆ ಒಳಗೆ ಸ್ಕೈ ಡೈವಿಂಗ್ ಸಾಹಸ ನೋಡಿ! appeared first on Kannada Public tv.