Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80395

ಸ್ವರಾಜ್ಯದಿಂದ ಸುರಾಜ್ಯದೆಡೆಗೆ ಸಾಗುತ್ತಿದೆ ಭಾರತ: ಮೋದಿ

$
0
0

– 60 ವರ್ಷದ ಕೆಲಸ 60 ವಾರದಲ್ಲಿ ಆಗಿವೆ
– ನನ್ನ ಕೆಲಸದಲ್ಲಿ ಸ್ವಹಿತ ಇಲ್ಲ ಎಂದ ಮೋದಿ

ನವದೆಹಲಿ: 70ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿದರು. ಇದಕ್ಕೂ ಮೊದಲು ಮಹಾತ್ಮ ಗಾಂಧಿ ಅವರು ಸಮಾಧಿಗೆ ನಮಿಸಿ ಕೆಂಪುಕೋಟೆಗೆ ಆಗಮಿಸಿದರು.

ಧ್ವಜಾರೋಹಣದ ಬಳಿಕ ದೇಶದ ಜನರನ್ನ ಉದ್ದೇಶಿಸಿ ಮಾತನಾಡಿದ ಅವರು, ನಾನು ಹಿಂದಿನ ಸರ್ಕಾರ ಆಡಳಿತವನ್ನು ಗೌರವಿಸುತ್ತೇನೆ. ನಮ್ಮ ಕನಸುಗಳು ಹೆಚ್ಚಾಗಬೇಕು. ಎಲ್ಲಾ ಸರ್ಕಾರಗಳು ದೇಶದ ಅಭಿವೃದ್ಧಿಗಾಗಿ ಶ್ರಮಿಸಿವೆ. ದೇಶದ ಅಭಿವೃದ್ಧಿಗಾಗಿ ನಾವು ಹೆಚ್ಚು ಹೆಚ್ಚು ಕನಸುಗಳನ್ನು ಕಾಣಬೇಕಿದೆ. ಸುಭದ್ರ ದೇಶದ ಕನಸನ್ನು ಸಹಕಾರಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು.

ಟ್ರಾನ್ಸ್ ಫಾರ್ಮ್ ಮಂತ್ರ: ದೇಶದಲ್ಲಿ ಹಲವು ರೀತಿಯ ಮಹತ್ವದ ಬದಲಾವಣೆಗಳಾಗಬೇಕಿದೆ. ಇದಕ್ಕಾಗಿ ರೀಫಾರ್ಮ್, ಪಫಾರ್ಮ್, ಟ್ರಾನ್ಸ್ ಫಾರ್ಮ್ ಮಂತ್ರ ನಮದಾಗಬೇಕು. ಸ್ವರಾಜ್ಯದಿಂದ ಸುರಾಜ್ಯದೆಡೆಗೆ ಭಾರತ ಸಾಗುತ್ತಿದೆ. ಈ ಹಿಂದೆ ಸರ್ಕಾರದ ಆಡಳಿತ ನಡೆಸುವವರಿಗೆ ಸರ್ಕಾರಿ ಖಜಾನೆ ಖಾಲಿ ಮಾಡು ಖಯಾಲಿ ಇತ್ತು. ನಾನು ಈ ಖರ್ಚಿನ ಮೋಹದಿಂದ ದೂರ ಉಳಿದಿದ್ದೇನೆ. ನಾನು ಯಾವತ್ತೂ ವೈಯಕ್ತಿಕ ಹಿತಾಸಕ್ತಿಗಾಗಿ ದುಡಿದಿಲ್ಲ. ಆಡಳಿತ ವ್ಯವಸ್ಥೆಯಲ್ಲಿ ನಾನು ಪಾರದರ್ಶಕತೆ ತರಲು ಶ್ರಮಪಡುತ್ತೇನೆ. ದೇಶದ ಬೆಳವಣಿಗೆ ವಿಶ್ವದ ಗಮನವನ್ನು ಸೆಳೆಯಲು ಅನುಕೂಲವಾಗಿದೆ. ಅಭಿವೃದ್ಧಿಗಾಗಿ ನಾವು ಕೊಂಡ ನಿರ್ಧಾರದ ಬಗ್ಗೆ ಜನರಲ್ಲಿ ಹೆಮ್ಮೆಯಿದೆ.

ಹಣದುಬ್ಬರ ಇಳಿಕೆ: 60 ವರ್ಷದ ಕೆಲಸ 6 ವಾರಗಳಲ್ಲಿ ಆಗಿದೆ. ಅಧಿಕಾರ ಚುಕ್ಕಾಣಿ ಹಿಡಿದ ದಿನದಿಂದ ಹಣದುಬ್ಬರ ನಿಯಂತ್ರಣಕ್ಕೆ ಶ್ರಮಿಸಲಾಗ್ತಿದೆ. ಈ ಮೊದಲು ಶೇಕಡಾ 10 ರಷ್ಟು ಹಣದುಬ್ಬರ ಇತ್ತು. ಈಗ ಆ ಹಣದುಬ್ಬರವನ್ನು ಶೇಕಡಾ 6ಕ್ಕೆ ಇಳಿಸಿದ್ದೇವೆ. ಇಂದು ಕಲ್ಲಿದ್ದನ ಹಗರಣದ ಸುದ್ದಿಯೇ ಇಲ್ಲ, ಆನ್‍ಲೈನ್‍ಲ್ಲಿ ಕಲ್ಲಿದ್ದಲು ಹರಾಜು ಆಗುತ್ತಿರೋದ್ರಿಂದ ಸರ್ಕಾರಕ್ಕೆ ಹೆಚ್ಚು ಲಾಭವಾಗ್ತಿದೆ.

ಆಧಾರ್ ಯೋಜನೆ: ದರ್ಪದ ಪ್ರಜಾಪ್ರಭುತ್ವಕ್ಕೆ ನಮ್ಮಲ್ಲಿ ಅವಕಾಶವಿಲ್ಲ, ಕಾರ್ಯಕ್ಕಿಂತ ಸಂಸ್ಕøತಿ ಮುಖ್ಯ. ನಷ್ಟದಲ್ಲಿದ್ದ ಏರ್‍ಇಂಡಿಯಾ ಬಿಎಸ್‍ಎನ್‍ಎಲ್ ಕಂಪನಿಗಳನ್ನು ಲಾಭವತ್ತ ಮಾಡಿದ್ದೇವೆ. ಒಬಿಸಿ, ಎಸ್ಸಿ, ಎಸ್‍ಟಿ ಅವರ ಏಳಿಗೆಗೆ ನಾಮ್ಮ ಸರ್ಕಾರ ಆಧ್ಯತೆ ನೀಡ್ತಿದೆ. ಕರ್ತವ್ಯ ನಿರತ ಮಹಿಳೆಯ ಹೆರಿಗೆ ರಜೆಯ ಅವಧಿ 3 ತಿಂಗಳಿಂದ ಆರು ತಿಂಗಳಿಗೆ ವಿಸ್ತರಣೆ, ಆಧಾರ್ ಯೋಜನೆಯಿಂದ ದೇಶಕ್ಕೆ ಅನುಕೂಲವಾಗಿದೆ.

ಆನ್‍ಲೈನ್‍ನಿಂದ ಸಹಾಯ: ಈ ಹಿಂದೆ ಆಸ್ಪತ್ರೆಗೆ ಹೋಗಬೇಕೆಂದರೆ ದೀರ್ಘಕಾಲದವರೆಗೂ ಕಾಯಬೇಕಿತ್ತು. ಆದರೆ ಆನ್ ಲೈನ್ ಮಾಧ್ಯಮಗಳು ಅಭಿವೃದ್ಧಿಗೊಂಡಾಗಿನಿಂದ ಆನ್‍ಲೈನ್ ನೋಂದಾವಣಿ ಮಾಡಿಕೊಂಡು ಬದಲಾವಣೆಯನ್ನ ಕಂಡಿದ್ದೇವೆ. ಇಂದು ಕೇವಲ 1 ನಿಮಿಷದಲ್ಲಿ 15 ಸಾವಿರ ರೈಲು ಟಿಕೆಟ್‍ಗಳನ್ನ ಪಡೆಯಬಹುದಾಗಿದೆ. ಆನ್‍ಲೈನ್ ಮೂಲಕವೇ ಹಣವನ್ನ ಹಿಂಪಡೆಯುವ ಸೌಲಭ್ಯವನ್ನ ನಾವು ಆರಂಭಿಸಿದ್ದೇವೆ. ಹೀಗಾಗಿ 2-3 ವಾರದೊಳಗೆ ಹಣವನ್ನ ಸುಲಭವಾಗಿ ಹಿಂಪಡೆಯುವಬಹುದಾಗಿದೆ.

ಶೀಘ್ರ ಪಾಸ್‍ಪೋರ್ಟ್: ಈ ಹಿಂದೆ ಪಾಸ್‍ಪೋರ್ಟ್‍ಗಳಿಗಾಗಿ ಸಾಕಷ್ಟು ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೂ ಕಾಯಬೇಕಿತ್ತು. ಇದಕ್ಕಾಗಿ ಸಾಕಷ್ಟು ತಪಸಣಾ ಪ್ರಕ್ರಿಯೆಗಳಿದ್ದವು. ಒಂದು ಪಾಸ್‍ಪೋರ್ಟ್ ಮಾಡಿಸಿಕೊಳ್ಳಬೇಕೆಂದರೆ ಕನಿಷ್ಠ ಪಕ್ಷ 4-6 ತಿಂಗಳ ಕಾಲ ಕಾಯಬೇಕಿತ್ತು. ಆದರೆ ಇಂದು ಕೇವಲ 2-3 ವಾರಗಳಲ್ಲಿ ಪಾಸ್ ಪಾರ್ಟ್ ಪಡೆಯಬಹುದಾಗಿದೆ.

ರೈತರ ಆದಾಯ ಹೆಚ್ಚಿಸುವ ಕನಸು: 60 ವರ್ಷಗಳಲ್ಲಿ 14 ಜನರು ಗ್ಯಾಸ್ ಸಂಪರ್ಕಗಳನ್ನ ಪಡೆದುಕೊಂಡಿದ್ದರು. ಆದರೆ ನಮ್ಮ ಸರ್ಕಾರ 60 ವಾರಗಳಲ್ಲಿ 4 ಕೋಟಿ ಜನರಿಗೆ ಗ್ಯಾಸ್ ಸಂಪರ್ಕವನ್ನ ಕಲ್ಪಿಸಿತು. ಸರ್ಕಾರ ರೈತರಿಗೆ ಸಹಾಯಕವಾಗುವ ಸಲುವಾಗಿ ಸಾಕಷ್ಟು ನೀರಾವರಿ ಯೋಜನೆಗಳನ್ನ ಜಾರಿಗೆ ತಂದಿದೆ. ನಮ್ಮ ದೇಶದ ರೈತರಿಗೆ ಸರಿಯಾದ ರೀತಿಯಲ್ಲಿ ನೀರು ದೊರಕಿದ್ದೇ ಆದಲ್ಲಿ ಅವರು ಭೂಮಿಯನ್ನ ಚಿನ್ನದಂತೆ ಮಾರ್ಪಡು ಮಾಡುತ್ತಾರೆ. 2022ರೊಳಗಾಗಿ ರೈತರ ಆದಾಯವನ್ನ ದುಪ್ಪಟ್ಟು ಮಾಡುವುದೇ ನನ್ನ ಕನಸಾಗಿದೆ.

ಜಿಎಸ್‍ಟಿ ಬಿಲ್: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ದೇಶದ ಆರ್ಥಿಕತೆಗೆ ಬಲವನ್ನ ನೀಡಿದೆ, ಜಿಎಸ್‍ಟಿ ಮಸೂದೆಗೆ ಬೆಂಬಲ ಸೂಚಿಸಿದ ಎಲ್ಲಾ ಪಕ್ಷಗಳಿಗೆ ಧನ್ಯವಾದ ಸಲ್ಲಿಸುತ್ತೇನೆ. ಒಂದೇ ದೇಶ, ಒಂದೇ ಚೌಕಟ್ಟು ಮತ್ತು ಒಂದೇ ಬೆಲೆ ಕುರಿತು ನಾವು ಕೆಲಸ ಮಾಡುತ್ತೀದ್ದೇವೆ, ಮಾಡುತ್ತೇವೆ.

ಸಾಮಾನ್ಯ ಜನರ ಜೀವನ ಬದಲಿಸಲು ಸರ್ಕಾರ ಬದ್ಧವಾಗಿದೆ, ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಉತ್ತಮ ಸಮಾಜದಿಂದ ಭದ್ರ ದೇಶವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದು ತಮ್ಮ ಭಾಷಣದಲ್ಲಿ ವ್ಯಕ್ತಪಡಿಸಿದರು.

modi-4

The post ಸ್ವರಾಜ್ಯದಿಂದ ಸುರಾಜ್ಯದೆಡೆಗೆ ಸಾಗುತ್ತಿದೆ ಭಾರತ: ಮೋದಿ appeared first on Kannada Public tv.


Viewing all articles
Browse latest Browse all 80395

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>