ಶ್ರೀನಗರ: ಇಡೀ ದೇಶವೇ 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ಮುಳುಗಿದ್ರೆ, ಇತ್ತ ಉಗ್ರರು ಜಮ್ಮು ಕಾಶ್ಮೀರ ಹಾಗೂ ಅಸ್ಸಾಂನಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾರೆ.
ಜಮ್ಮು ಕಾಶ್ಮೀರದ ಗಡಿಭಾಗದಲ್ಲಿ ಉಗ್ರರು ಏಕಾಏಕಿ ದಾಳಿ ನಡೆಸುತ್ತಿದ್ದು, ಘಟನೆಯಲ್ಲಿ ಆರು ಸಿಆರ್‍ಎಫ್ ಯೋಧರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಉಗ್ರರ ದಾಳಿಗೆ ಭಾರತೀಯ ಯೋಧರರು ತಕ್ಕ ಉತ್ತರವನ್ನು ನೀಡಿದ್ದು, ಅಡಗಿ ಕುಳಿತು ದಾಳಿ ನಡೆಸ್ತಿರುವ ಉಗ್ರರ ಹೊಡೆದುರುಳಿಸಲು ಕಾರ್ಯಾಚರಣೆ ಶುರು ಮಾಡಿದ್ದಾರೆ.
ಇತ್ತ ಅಸ್ಸಾಂನ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ಉಗ್ರರು 4 ಕಡೆ ಬಾಂಬ್ ಸ್ಫೋಟ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ದೌಡಾಯಿಸಿ ಪರಿಶೀಲನೆ ನಡೆಸ್ತಿದ್ದಾರೆ.
The post ಸ್ವಾತಂತ್ರ್ಯೋತ್ಸವದ ದಿನದಂದೇ ಜಮ್ಮು ಕಾಶ್ಮೀರ, ಅಸ್ಸಾಂನಲ್ಲಿ ಉಗ್ರರ ಅಟ್ಟಹಾಸ appeared first on Kannada Public tv.