ಲಂಡನ್: ಪ್ರಧಾನ ಮಂತ್ರಿಗಳನ್ನೇ ಯಾರಾದ್ರೂ ಹರಾಜು ಹಾಕೋ ಸಾಹಸ ಮಾಡ್ತಾರಾ ಅಂತ ಹುಬ್ಬೇರಿಸಬೇಡಿ. ಈ ವಿಷಯ ಹಾಸ್ಯಾಸ್ಪದವಾಗಿ ಕಂಡರೂ ನೀವು ನಂಬಲೇಬೇಕು. ಇಂಗ್ಲೆಂಡಿನ ಪ್ರಧಾನಿ ಮಂತ್ರಿ ಡೇವಿಡ್ ಕ್ಯಾಮರೂನ್ ಅವರ ಫೋಟೋವನ್ನ ಇ-ಬೇ ಆನ್‍ಲೈನ್ ಸೈಟ್‍ನಲ್ಲಿ ಅಪ್‍ಲೋಡ್ ಮಾಡಿ ಪ್ರಧಾನಿಯನ್ನೇ ಹರಾಜಿಗೆ ಇಟ್ಟಿದ್ದಾರೆ.
ಚಿತ್ರಕ್ಕೆ ನೀಡಿರುವ ವಿಶ್ಲೇಷಣೆಯಲ್ಲಿ ಹೀಗೆ ಹೇಳಲಾಗಿದೆ: ಬಳಸಲಾಗಿರುವ, ಬೇಡವಾಗಿರುವ ಪ್ರಧಾನ ಮಂತ್ರಿ. ಬಾಕ್ಸ್ ಇಲ್ಲ, ಸೂಚನೆಗಳಿಲ್ಲ. ಆದರೆ ಇವರು ನಿಮಗೆ ಬೇಕಾದರೆ ಲಂಡನ್‍ಗೆ ಬರಲು ಸಿದ್ಧರಿರಬೇಕು. ಮಾರಾಟಗಾರರು ಇವರನ್ನು ಮುಟ್ಟುವಂತಿಲ್ಲ. ಕೊಳ್ಳುವವರೇ ತಮ್ಮದೇ ವಾಹನದಲ್ಲಿ ಲಂಡನ್‍ಗೆ ಬಂದು ಕೊಂಡೊಯ್ಯಬೇಕು. ವ್ಯಾಪಾರ ಪಕ್ಕಾ ಆದ ನಂತರ ವಿಳಾಸ ತಿಳಿಸಲಾಗುತ್ತದೆ.
ಹೀಗೆಲ್ಲಾ ವಿವರಣೆ ನೀಡಿ ಪ್ರಧಾನಿಯನ್ನ ಹರಾಜು ಹಾಕಿದ್ದಾರೆ. ಈ ಆಫರ್‍ಗೆ 153 ಜನ ಹರಾಜು ಕೂಗಿದ್ದು, ಹರಾಜು ಮೊತ್ತ 65,900 ಪೌಂಡ್ಸ್ (ಅಂದಾಜು 62.6 ಲಕ್ಷ ರೂ.)ವರೆಗೆ ತಲುಪಿತ್ತು. ಆದರೆ ಸದ್ಯಕ್ಕೆ ಈ ಪೋಸ್ಟನ್ನು ಇ-ಬೇ ತೆಗೆದುಹಾಕಿದೆ.
The post ಇ-ಬೇ ನಲ್ಲಿ ಇಂಗ್ಲೆಂಡ್ ಪ್ರಧಾನಿಯನ್ನೇ ಹರಾಜಿಗಿಟ್ರು! appeared first on Public TV.