ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿಂದು ದಾಖಲೆ ಉಷ್ಣಾಂಶ ದಾಖಲಾಗಿದೆ. ಇಂದು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಇದು ಇದುವರೆಗೆ ದಾಖಲಾದ ಅತ್ಯಧಿಕ ಉಷ್ಣಾಂಶವಾಗಿದೆ.
ಇದುವರೆಗೆ 1931, ಮೇ 22 ರಲ್ಲಿ ದಾಖಲಾಗಿದ್ದ 39 ಡಿಗ್ರಿ ಉಷ್ಣಾಂಶವೇ ಅತ್ಯಧಿಕವಾಗಿತ್ತು. ಇಂದು 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗುವ ಮೂಲಕ ಹಿಂದಿನ ದಾಖಲೆಗಳನ್ನು ಮುರಿದಿದೆ. ಬೆಂಗಳೂರಿನ 16 ಕೇಂದ್ರಗಳ ಪೈಕಿ 8 ಕೇಂದ್ರಗಳಲ್ಲಿ 39 ಡಿಗ್ರಿ ಉಷ್ಣಾಂಶ ದಾಟಿದೆ ಎಂದು ಪಬ್ಲಿಕ್ ಟಿವಿಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ.
ಯಲಹಂಕ ಚೌಡೇಶ್ವರಿ ವಾರ್ಡ್‍ನಲ್ಲಿ 40 ಡಿಗ್ರಿ, ಬೆಂಗಳೂರು ನಗರ 40.9, ಬೆಂಗಳೂರು ಗ್ರಾಮಾಂತರ 40.6 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
The post ಎಲ್ಲ ದಾಖಲೆ ಬ್ರೇಕ್; ಬೆಂಗಳೂರಿನಲ್ಲಿಂದು ದಾಖಲೆ ಉಷ್ಣಾಂಶ ದಾಖಲು appeared first on Public TV.