Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80385

2 ಎಕರೆಯಲ್ಲಿ ತುಳಸಿ ಬೆಳೆದು ದಾನ ಮಾಡ್ತಾರೆ ಕೊಪ್ಪಳದ ರೈತ!

$
0
0

 

ಕೊಪ್ಪಳ: ಭತ್ತದ ನಾಡು ಎಂದಾಕ್ಷಣ ಇಲ್ಲಿನ ಜಮೀನಿಗೆ ಬಾರಿ ಬೇಡಿಕೆ ಇದೆ. ಗೇಣು ಭೂಮಿ ಸಿಕ್ಕರೆ ಸಾಕು ಭತ್ತ ಬೆಳೆಯುತ್ತಾರೆ. ಎಕರೆ ಜಮೀನು ಕೋಟ್ಯಾಂತರ ರೂಪಾಯಿ ಬೆಲೆಬಾಳುತ್ತದೆ. ಅಷ್ಟೊಂದು ಮಹತ್ವ ಹೊಂದಿರುವ ಇಲ್ಲಿನ ಕೃಷಿ ಭೂಮಿಯಲ್ಲಿ ಇಲ್ಲೊಬ್ಬ ರೈತ ಎರಡು ಎಕರೆ ತುಳಸಿ ಬೆಳೆದು ಜನಸಾಮಾನ್ಯಾರಿಗೆ, ದೇವಸ್ಥಾನ, ಪೂಜೆ ಪುನಸ್ಕಾರಗಳಿಗೆ ತುಳಸಿಯನ್ನು ಉಚಿತವಾಗಿ ದಾನ ಮಾಡುತ್ತಾ ಬಂದಿದ್ದಾರೆ.

ಯಂಕಪ್ಪ ಕಟ್ಟಿಮನಿ ಮೂಲತ ಕೊಪ್ಪಳದ ಗಂಗಾವತಿ ನಿವಾಸಿ. ಗಂಗಾವತಿ ತಾಲೂಕಿನ ಹೀರೆಬೇಣಕಲ್ ಗ್ರಾಮದ ಬಳಿ 8 ಎಕರೆ ಜಮೀನಿನಲ್ಲಿ 2 ಎಕರೆ ತುಳಸಿ ಬೆಳೆಸುತ್ತಿದ್ದಾರೆ. ಈ ಮೊದಲು ಹೈದ್ರಾಬಾದ್ ಕರ್ನಾಟಕದಲ್ಲಿ ತುಳಸಿ ಎಲ್ಲಿಯೂ ಬೆಳೆಯುವುದಿಲ್ಲ. ಅತ್ಯಂತ ಅವಶ್ಯಕವಿರುವ ಈ ತುಳಿಸಿಯನ್ನು ಸ್ಥಳೀಯರು ಆಂಧ್ರ ಪ್ರದೇಶಕ್ಕೆ ತುಳಸಿ ತರಲು ಹೋಗುತ್ತಿದ್ದರು. ಅದನ್ನೆಲ್ಲ ಗಮನಿಸಿದ ರೈತ ಯಂಕಪ್ಪ ಕಟ್ಟಿಮನಿ ತನ್ನ ಜಮೀನಿನಲ್ಲಿಯೇ ಕಳೆದ 10 ವರ್ಷದ ಹಿಂದೆ ಆಂಧ್ರದ ಈರಾಳ ನಗರದಿಂದ ತುಳಸಿ ಸಸಿಗಳನ್ನು ತಂದು ಬೆಳೆಸುತ್ತಿದ್ದಾರೆ.

ವರ್ಷವಿಡಿ ತುಳಸಿ ಗಿಡ ಬೆಳೆಸಿಕೊಂಡು, ತುಳಸಿ ನಾಟಿ ಮಾಡಿಕೊಂಡು ಬೆಳೆಸುತ್ತಾ ಉಚಿತವಾಗಿ ದಾನ ಮಾಡುತ್ತಾರೆ. ತೋಟಕ್ಕೆ ಬಂದು ಕೇಳಿದವರಿಗೆ ಪಾಕೆಟ್‍ನಲ್ಲಿ ಬೆಳೆಸಿದ ಸಸಿಗಳನ್ನು ದಾನ ಮಾಡುತ್ತಾರೆ. ದೇವಸ್ಥಾನಗಳಲ್ಲಿ ಪೂಜೆ, ಧಾರ್ಮಿಕ ಕಾರ್ಯಕ್ರಮ ಇರುವ ಕಡೆಗಳಲ್ಲಿ ತುಳಸಿ ಸಸಿಗಳನ್ನು ಭಕ್ತರಿಗೆ ನೀಡುತ್ತಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ನರ್ಸರಿಯಲ್ಲಿ ಗಿಡಗಳನ್ನು ಬೆಳೆಸಿದ ಹಾಗೆ ತುಳಸಿ ಸಸಿಗಳನ್ನು ಬೆಳೆಸುತ್ತಾರೆ. ವರ್ಷಕ್ಕೆ ತುಳಸಿ ದಾನಕ್ಕೆ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ.

ಶ್ರಾವಣ ಮಾಸ, ಕಾರ್ತಿಕ ಮಾಸ, ಶಿವರಾತ್ರಿ ಬಂದರೆ ಸಾಕು ನಾನಾ ಕಡೆಗಳಿಂದ ದೇವಸ್ಥಾನಗಳಿಗೆ ತುಳಸಿ ದಳಗಳನ್ನು ತೆಗೆದುಕೊಂಡು ಹೊಗಲು ಭಕ್ತರು ರೈತ ಯಂಕಪ್ಪ ಕಟ್ಟಿಮನಿಯ ತೋಟಕ್ಕೆ ಸಾಲುಗಟ್ಟಿ ಬರುತ್ತಾರೆ. ಬಹುತೇಕ ಜನರು ಪೂಜೆಗೆಂದು ತುಳಸಿ ದಳಗಳನ್ನು ತೆಗೆದುಕೊಂಡು ಹೋಗುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಬಂದ ಭಕ್ತರಿಗೆ ಅಲ್ಪೋಪಹಾರ ಮಾಡಿ ಕಳಿಸುತ್ತಾರೆ. ದಾವಣಗೆರೆ, ಕೊಪ್ಪಳ, ಬಳ್ಳಾರಿ, ರಾಯಚೂರು, ಗದಗ, ಬಾಗಲಕೋಟೆ ಸೇರಿದಂತೆ ಸುತ್ತಲ ಜಿಲ್ಲೆಗೆಳ ಜನರು ತುಳಸಿ ದಳಗಳನ್ನೂ ತೆಗೆದುಕೊಂಡು ಹೋಗಲು ಬರುತ್ತಾರೆ.

ಇವರ ತುಳಸಿ ಪೂಜೆ ಪುನಸ್ಕಾರಕ್ಕೆ ಅಷ್ಟೇ ಹೋಗವುದಿಲ್ಲ. ಆಯುರ್ವೇಧಿಕ ಔಷಧಿಯಾಗಿರುವ ತುಳಸಿ ಗಿಡವನ್ನು ರೋಗಿಗಳು ತೆಗೆದುಕೊಂಡು ಹೋಗುತ್ತಾರೆ. ಕೆಮ್ಮು, ಎದೆ ನೋವು, ಮೊಣಕಲಾಲು ನೋವು ಸೇರಿದಂತೆ ಇತರೆ ಕಾಯಿಲೆಗಳಗೆ ತುಳಸಿ ಖಷಾಯ ಅವಶ್ಯಕವಾಗಿರುವ ಕಾರಣ ಇಲ್ಲಿಂದಲೇ ತುಳಸಿ ತೆಗೆದುಕೊಂಡು ಹೋಗುತ್ತಾರೆ. ಉಳಿದ ಆರು ಎಕರೆ ಜಮೀನಿನಲ್ಲಿ ಇವರು ದಾಳಂಬೆ, ಮಾವು, ಲಿಂಬೆ ಬೆಳೆದಿದ್ದಾರೆ. ಅದರ ಜೊತೆಗೆ ತೋಟ, ತುಳಸಿ ಬೆಳೆಗೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ.

The post 2 ಎಕರೆಯಲ್ಲಿ ತುಳಸಿ ಬೆಳೆದು ದಾನ ಮಾಡ್ತಾರೆ ಕೊಪ್ಪಳದ ರೈತ! appeared first on Kannada Public tv.


Viewing all articles
Browse latest Browse all 80385

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>