Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80062

ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಸೆಮಿಫೈನಲ್‍ಗೆ ಲಗ್ಗೆ: ಪದಕದ ಭರವಸೆ

$
0
0

 

ರಿಯೋ ಡಿ ಜನೈರೋ: ಒಲಿಂಪಿಕ್ಸ್ ಭಾರತದ ಪದಕದ ಹತ್ತಿರಕ್ಕೆ ಬಂದಿದೆ. ಟೆನ್ನಿಸ್‍ನಲ್ಲಿ ರೋಹನ್ ಬೋಪ್ಪಣ, ಸಾನಿಯಾ ಮಿರ್ಜಾ ಜೋಡಿ ಪದಕ ಗೆಲ್ಲುವ ಭರವಸೆ ಮೂಡಿಸಿದೆ.

ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಗ್ರೇಟ್ ಬ್ರಿಟನ್ ಜೋಡಿ ವಿರುದ್ಧ ನೇರಸೆಟ್‍ಗಳಿಂದ ಭರ್ಜರಿ ಜಯಗಳಿಸಿದ್ರು. ಈ ಮೂಲಕ ಈ ಬಾರಿಯ ಒಲಿಂಪಿಕ್‍ನಲ್ಲಿ ಸೆಮಿ ಫೈನಲ್‍ಗೆ ಲಗ್ಗೆ ಇಟ್ಟ ಮೊದಲ ಜೋಡಿಯಾಗಿದೆ. ಇಂದು ರಾತ್ರಿ ಸೆಮಿಫೈನಲ್ ಪಂದ್ಯ ನಡೆಯಲಿದೆ.

ಇತ್ತ 36 ವರ್ಷಗಳ ಬಳಿಕ ಭಾರತ ಹಾಕಿ ತಂಡ ಇದೇ ಮೊದಲ ಭಾರಿಗೆ ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದೆ. ಕೆನಡಾ ವಿರುದ್ಧ ಕಣಕ್ಕಿಳಿದ ಭಾರತ, ಉತ್ತಮ ಪ್ರದರ್ಶನ ನೀಡ್ತು. ಅಂತಿಮವಾಗಿ 2-2 ಗೋಲುಗಳ ಅಂತರದಲ್ಲಿ ಪಂದ್ಯ ಡ್ರಾ ಆಯ್ತು. ಇದರೊಂದಿಗೆ ಬಿ ಪಟ್ಟಿಯಲ್ಲಿ ಮೇಲಕ್ಕೇರಿದ ಭಾರತ, ಪದಕದ ಕನಸು ಮೂಡಿಸಿದೆ.

75 ಕೆ.ಜಿ. ಮಿಡ್ಲ್‍ವೇಯ್ಟ್ ವಿಭಾಗದ ಬಾಕ್ಸಿಂಗ್‍ನಲ್ಲಿ ವಿಕಾಸ್ ಕೃಷ್ಣನ್ ಟರ್ಕಿಯ ವೊಂಡರ್ ಸಿಪಲ್‍ಗೆ ಪಂಚ್ ಕೊಟ್ಟು ಕ್ವಾರ್ಟರ್ ಫೈನಲ್‍ಗೆ ಎಂಟ್ರಿ ಪಡೆದಿದ್ದಾರೆ.

The post ಟೆನ್ನಿಸ್ ಮಿಶ್ರ ಡಬಲ್ಸ್ ನಲ್ಲಿ ಸೆಮಿಫೈನಲ್‍ಗೆ ಲಗ್ಗೆ: ಪದಕದ ಭರವಸೆ appeared first on Kannada Public tv.


Viewing all articles
Browse latest Browse all 80062


<script src="https://jsc.adskeeper.com/r/s/rssing.com.1596347.js" async> </script>