ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್ ಆಗಿದ್ದು ರಿಯಲ್ ಲೈಫನಲ್ಲೂ `ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಜೋಡಿ ಸಪ್ತಪದಿ ತುಳಿಯಲಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದ ದಿನ ನಿಶ್ಚಿತಾರ್ಥ ನಡೆಯಲಿದ್ದು ಡಿಸೆಂಬರ್‍ನಲ್ಲಿ ಅದ್ಧೂರಿ ವಿವಾಹಮಹೋತ್ಸವ ನಡೆಯಲಿದೆ.ಶುಕ್ರವಾರ ಗೋವಾದ ಖಾಸಗಿ ಹೋಟೆಲ್‍ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು ಕುಟುಂಬಸ್ಥರು, ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.
ಡಿಸೆಂಬರ್‍ನಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮದುವೆ ನಡೆಸಲು ಇಬ್ಬರ ಕುಟಂಬಸ್ಥರು ನಿರ್ಧರಿಸಿದ್ದಾರೆ.
The post ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮದುವೆ ಫಿಕ್ಸ್ appeared first on Kannada Public tv.