ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬಕ್ಕೆ ಆಗಮಿಸುವ ಕಿಚ್ಚ ಸುದೀಪ್ – ನಿತ್ಯಾ ಮೆನನ್ ಅಭಿನಯದ ಕೋಟಿಗೊಬ್ಬ 2 ಸಿನೆಮಾವನ್ನು ಸ್ವಾಗತಿಸಲು ಕಿಚ್ಚನ ಅಭಿಮಾನಿಗಳು ಬೆಂಗಳೂರಿನಲ್ಲಿ ಸಿದ್ಧರಾಗುತ್ತಿದ್ದಾರೆ.
ಕೋಟಿಗೊಬ್ಬ 2 ರಿಲೀಸ್ ದಿನದ ಸಂಭ್ರಮಕ್ಕೆಂದೇ 7 ಲಕ್ಷ ರೂ. ಖರ್ಚು ಮಾಡಲು ಅಖಿಲ ಕರ್ನಾಟಕ ಕಿಚ್ಚ ಸುದೀಪ ಸೇನಾ ಸಮಿತಿ ನಿರ್ಧರಿಸಿದೆ. ಇದರಲ್ಲಿ 5 ಲಕ್ಷ ರೂ.ಗಳನ್ನು ಹೂವಿನ ಅಲಂಕಾರಕ್ಕೆ ಬಳಕೆಯಾಗಲಿದೆ. ಸಂತೋಷ್ ಥಿಯೇಟರ್ ಮುಂಭಾಗ 70 ಅಡಿ ಎತ್ತರದ ಸುದೀಪ್ ಕಟೌಟ್ ಅನಾವರಣಗೊಳ್ಳಲಿದೆ. ಶುಕ್ರವಾರ ಥಿಯೇಟರ್ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸುವುದಾಗಿ ಅಖಿಲ ಕರ್ನಾಟಕ ಕಿಚ್ಚ ಸುದೀಪ ಸೇನಾ ಸಮಿತಿ ಹೇಳಿದೆ.
ದೊಡ್ಡಬಳ್ಳಾಪುರದಲ್ಲಿ ಕಿಚ್ಚನ ಅಭಿಮಾನಿಗಳು ರಕ್ತದಾನ ಶಿಬಿರ ಏರ್ಪಡಿಸಿದ್ದರೆ, ಕೆಲವು ಅಭಿಮಾನಿಗಳು ತಮ್ಮ ಕಾರಿಗೆ ಕಿಚ್ಚ ಸುದೀಪ್ ಪೋಸ್ಟರ್ ಅಂಟಿಸಿ ನಾಯಕನೆಡೆಗೆ ಅಭಿಮಾನ ಮೆರೆಯುತ್ತಿದ್ದಾರೆ.
ಒಟ್ಟಾರೆ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ವಾಗತಿಸಲು ಭರ್ಜರಿಯಾಗಿ ಸಜ್ಜಾಗುತ್ತಿದ್ದಾರೆ.
The post ಕಿಚ್ಚನ ಕೋಟಿಗೊಬ್ಬ-2 ಸ್ವಾಗತಿಸಲು ಅಭಿಮಾನಿಗಳು ಸಜ್ಜು! appeared first on Kannada Public tv.