Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80002

ಬಾಲ್ಯ ವಿವಾಹ ವಿರೋಧಿಸಿ, ಪೋಷಕರ ಮನವೊಲಿಸಿ ಗೆದ್ದ ಬಾಲಕಿ

$
0
0

 

ಬೆಳಗಾವಿ: ಜಗತ್ತು ಎಷ್ಟೇ ಬದಲಾದ್ರೂ ಅನಿಷ್ಟ ಪದ್ಧತಿಗಳು ಮಾತ್ರ ಇನ್ನೂ ಜೀವಂತ. ಆದ್ರೆ ಇಂತಹ ಅನಿಷ್ಟ ಪದ್ಧತಿ ವಿರುದ್ಧ ಬಾಕಿಯೊಬ್ಬಳು ಸೆಡ್ಡು ಹೊಡೆದಿದ್ದಾಳೆ. ಬಾಲ್ಯ ವಿವಾಹ ವಿರೋಧಿಸಿ, ಇತರರಿಗೆ ಮಾದರಿಯಾಗಿದ್ದಾಳೆ. ಹೆತ್ತವರನ್ನ ಮನವೊಲಿಸಿ ಗೆದ್ದಿದ್ದಾಳೆ 14 ವರ್ಷದ ಬಾಲಕಿ.

ಬೆಳಗಾವಿಯ ಕಲಕಾಂಬ ಗ್ರಾಮದ ತುಳಸಿಗಿನ್ನೂ 14 ವರ್ಷ. ಮನೆಯಲ್ಲಿ ಮದ್ವೆ ಮಾಡೋಕೆ ರೆಡಿಯಾಗಿದ್ರು. ನಿಶ್ಚಿತಾರ್ಥ ಕೂಡ ಮಾಡಿದ್ರು. ಹೆತ್ತವರ ನಿರ್ಧಾರ ವಿರೋಧಿಸಿದ ತುಳಸಿ, ನಾನು ಬಾಲ್ಯ ವಿವಾಹ ಮಾಡ್ಕೊಳ್ಳಲ್ಲ. ಶಾಲೆ ಕಲ್ತು ವಿದ್ಯಾವಂತಳಾಗ್ತೀನಿ ಅಂತ ತಿಳಿ ಹೇಳಿದ್ದಾಳೆ. ರಾಜಿ ಪಂಚಾಯ್ತಿಯಲ್ಲೂ ಹಿಡದ ಹಠ ಸಾಧಿಸಿ ಮಾದರಿಯಾಗಿದ್ದಾಳೆ.

ಡಾನ್ ಬಾಸ್ಕೋ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಿರೋ ತುಳಸಿ, ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಲು ಬೀದಿ ನಾಟಕ ಮಾಡಿದ್ದಾಳೆ. ಇಷ್ಟೇ ಅಲ್ಲ ಅನಿಷ್ಟ ಪದ್ಧತಿಯ ವಿರುದ್ಧ ಮಾಹಿತಿ ನೀಡ್ತಾಳೆ. ಈಗ ತಮ್ಮ ತಂದೆಗೂ ಮನವರಿಕೆ ಮಾಡಿ ಇತರರಿಗೆ ಮಾದರಿಯಾಗಿದ್ದಾಳೆ.

ಒಟ್ಟಿನಲ್ಲಿ ಈ ಪುಟ್ಟ ಬಾಲಕಿ ತುಳಸಿಯ ಈ ನಿರ್ಧಾರ ನಿಜಕ್ಕೂ ಮಾದರಿ. ಇವಳ ದಿಟ್ಟತನವನ್ನ ನೋಡಿ ಇತರ ಮಕ್ಕಳು ಬಾಲ್ಯ ವಿವಾಹದ ವಿರುದ್ಧ ಸಿಡಿದೇಳಬೇಕಿದೆ.

The post ಬಾಲ್ಯ ವಿವಾಹ ವಿರೋಧಿಸಿ, ಪೋಷಕರ ಮನವೊಲಿಸಿ ಗೆದ್ದ ಬಾಲಕಿ appeared first on Kannada Public tv.


Viewing all articles
Browse latest Browse all 80002


<script src="https://jsc.adskeeper.com/r/s/rssing.com.1596347.js" async> </script>