ಲಾಹೋರ್: ಮನುಷ್ಯರ ಮೇಲೆ ನಾಯಿಗಳು ದಾಳಿ ಮಾಡಿದ ಪ್ರಕರಣಗಳು ಹೆಚ್ಚಾದ ಕಾರಣ ಸುಮಾರು 700 ಬೀದಿನಾಯಿಗಳಿಗೆ ವಿಷ ಹಾಕಿ ಕೊಂದಿರುವ ಘಟನೆ ಕರಾಚಿಯಲ್ಲಿ ನಡೆದಿದೆ.
ಚಿಕನ್ ನಲ್ಲಿ ವಿಷದ ಮಾತ್ರೆಗಳನ್ನಿಟ್ಟು ನಾಯಿಗಳನ್ನು ಕೊಲ್ಲಲಾಗಿದೆ. ಇಲ್ಲಿನ ಪಾಲಿಕೆ ಸಿಬ್ಬಂದಿ ನಗರದ ರಸ್ತೆಗಳಲ್ಲಿ ಸತ್ತು ಬಿದ್ದಿದ್ದ ನಾಯಿಗಳನ್ನು ಹೊರಹಾಕಲು ಒಂದೆಡೆ ಒಟ್ಟುಗೂಡಿಸುತ್ತಿದ್ದಾರೆ.
ಕರಾಚಿಯಲ್ಲಿ ಸುಮಾರು 700 ನಾಯಿಗಳ ಹತ್ಯೆಯಾಗಿದೆ ಎಂದು ಪಾಲಿಕೆ ವಕ್ತಾರರಾದ ಸತ್ತರ್ ಜಾವಿದ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ಇಲ್ಲಿನ 6 ನಗರಗಳಲ್ಲಿ ಸಾಮೂಹಿಕ ಹತ್ಯೆ ನಡೆದಿದ್ದು ಸಾವಿರಾರು ನಾಯಿಗಳು ಬಲಿಯಾಗಿವೆ. ಆದ್ರೆ ಈವರೆಗೂ ಕೊಲ್ಲಲ್ಪಟ್ಟ ನಾಯಿಗಳ ನಿರ್ದಿಷ್ಟ ಸಂಖ್ಯೆ ಎಷ್ಟು ಎಂಬುದು ತಿಳಿದುಬಂದಿಲ್ಲ. ಪಾಕಿಸ್ತಾನದ ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಇದನ್ನು ಖಂಡಿಸಿದ್ದಾರೆ.
ಈ ವರ್ಷ ಇಲ್ಲಿನ ಜಿನ್ನಾ ಆಸ್ಪತ್ರೆಯಲ್ಲಿ ನಾಯಿಗಳಿಂದ ಕಚ್ಚಿಸಿಕೊಂಡು ಚಿಕಿತ್ಸೆ ಪಡೆದ ಸುಮಾರು 3700 ಪ್ರಕರಣಗಳಿದೆ ಎಂದು ವರದಿಯಾಗಿದೆ. ಕಳೆದ ವರ್ಷ 6500 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 2015 ರಲ್ಲೂ ಪಾಕಿಸ್ತಾನದಲ್ಲಿ ಇದೇ ರೀತಿ ನಾಯಿಗಳ ಸಾಮೂಹಿಕ ಹತ್ಯೆ ನಡೆಸಲಾಗಿತ್ತು. ಸತ್ತು ಬಿದ್ದಿದ್ದ ನಾಯಿಗಳನ್ನ ಬಿಸಿಲಿನಲ್ಲಿ ಒಣಗಲು ಬಿಟ್ಟು ನಂತರ ಕಸದೊಂದಿಗೆ ಎಸೆಯಲಾಗಿತ್ತು.
The post ಪಾಕಿಸ್ತಾನ: 700 ಬೀದಿನಾಯಿಗಳಿಗೆ ವಿಷ ಹಾಕಿ ಕೊಂದ್ರು! appeared first on Kannada Public tv.