ಟೋಕಿಯೊ: ನಾಯಿಗಳನ್ನ ಮಕ್ಕಳಂತೆ ಸಾಕುವುದು ಸಾಮಾನ್ಯವಾಗಿದೆ. ಆದ್ರೆ ಜಪಾನ್‍ನಲ್ಲಿ ನಾಯಿಗಳನ್ನ ಮಡೆಲ್‍ಗಿಂತಲೂ ಹೆಚ್ಚಾಗಿ ಬೆಳೆಸಿದ್ದಾರೆ. ಇದೀಗ ಟ್ವಿನ್ಸ್ ನಾಯಿಗಳು ತಮ್ಮ ವಿಭಿನ್ನತೆಯಿಂದಲೇ ಜಗತ್‍ಪ್ರಸಿದ್ಧಿ ಹೊಂದಿವೆ.
ಹೌದು. ಜಪಾನ್‍ನ ಅವಳಿ ಜವಳಿ ನಾಯಿ ಮರಿಗಳಿಗೆ ಇನ್‍ಸ್ಟಾಗ್ರಾಮ್‍ನಲ್ಲಿ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಶಿಹ್ ಟುಡ್ಸ್ ಪಪ್ಪಿಸ್‍ಗಳಾದ ನಯೋ ಹಾಗೂ ಯ್ಯೂ ಮಾಡೆಲ್‍ಗಳಂತೆ ಬಿಂಬತವಾಗಿದೆ. ತಮ್ಮ ಹೇರ್‍ಸ್ಟೈಲ್‍ನಿಂದಲೇ ಈ ನಾಯಿಗಳು ಫೇಮಸ್ ಆಗಿವೆ.
ಈ ನಾಯಿಗಳ ಓನರ್ ರೀನಾ ನಾಯಿಗಳಿಗೆ ದಿನವೂ ಶ್ಯಾಂಪೂವಿನಿಂದ ಸ್ನಾನ ಮಾಡಿಸ್ತಾರಂತೆ. ಹೀಗಾಗಿಯೇ ಈ ನಾಯಿಗಳ ಕೂದಲು ಸಿಕ್ಕಾಪಟ್ಟೆ ನುಣುಪಾಗಿದೆ. ಜೊತೆಗೆ ಸೊಂಪಾಗಿ ಬೆಳದಿದೆ. ಹೆಣ್ಣು ಮಕ್ಕಳಂತೆ ಈ ನಾಯಿಗಳಿಗೆ ರೀನಾ ವಿಭಿನ್ನ ಹೇರ್‍ಸ್ಟೈಲ್ ಮಾಡಿ ಅವುಗಳ ಫೋಟೋಗಳನ್ನ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡ್ತಾರೆ. ಹೀಗಾಗಿ ಈ ನಾಯಿಗಳಿಗೆ ಇನ್‍ಸ್ಟಾಗ್ರಾಮ್‍ನಲ್ಲಿ 3,500 ಕ್ಕೂ ಹೆಚ್ಚು ಮಂದಿ ಫಾಲೋವರ್ಸ್‍ಗಳಿದ್ದಾರೆ.
The post ಮಾಡೆಲ್‍ಗಳನ್ನ ಮೀರಿಸಿದ ಟ್ವಿನ್ಸ್ ಡಾಗ್ಸ್: ಇನ್‍ಸ್ಟಾಗ್ರಾಮ್‍ನಲ್ಲಿ ಸಾವಿರಾರು ಫ್ಯಾನ್ಸ್ appeared first on Kannada Public tv.