Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80425

ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ಕ್ರಿಕೆಟಿಗ ಸಿಧು ದಿಢೀರ್ ರಾಜೀನಾಮೆ

$
0
0

ನವದೆಹಲಿ: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ಸೇರುವ ಸಾಧ್ಯತೆ ಮಾಧ್ಯಮಗಳು ವರದಿ ಮಾಡಿದೆ.

ಪಂಜಾಬ್ ವಿಧಾನಸಭಾ ಚುನಾವಣೆಗೆ ಆಪ್‍ನಿಂದ ಸ್ಪರ್ಧಿಸಲು ಸಿಧು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಈಗ ಆರಂಭವಾಗಿದೆ. ಇದೇ ವೇಳೆ ಸಿಧು ಅವರ ಪತ್ನಿಯೂ ನವಜೋತ್ ಕೌರ್ ಶಿರೋಮಣಿ ಅಕಾಲಿ ದಳ, ಬಿಜೆಪಿ ಮೈತ್ರಿಕೂಟ ಸರ್ಕಾರದ ಸಂಸದೀಯ ಕಾರ್ಯದರ್ಶಿಯಾಗಿದ್ದು ಈ ಹುದ್ದೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ಸಿಧು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಂಜಾಬ್‍ನಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ ಎನ್ನುವ ವಿಶ್ಲೇಷಣೆ ಆರಂಭವಾಗಿದೆ.

 

The post ಬಿಜೆಪಿ ರಾಜ್ಯಸಭಾ ಸ್ಥಾನಕ್ಕೆ ಕ್ರಿಕೆಟಿಗ ಸಿಧು ದಿಢೀರ್ ರಾಜೀನಾಮೆ appeared first on Kannada Public tv.


Viewing all articles
Browse latest Browse all 80425


<script src="https://jsc.adskeeper.com/r/s/rssing.com.1596347.js" async> </script>