ಮಡಿಕೇರಿ: ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಂಬಂಧ ಮಾಜಿ ಗೃಹ ಸಚಿವ ಕೆಜೆ ಜಾರ್ಜ್ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ, ಎಂಎಂ ಪ್ರಸಾದ್ ವಿರುದ್ಧ ಎಫ್‍ಐಎರ್ ದಾಖಲಿಸಲು ಮಡಿಕೇರಿ ಕೋರ್ಟ್ ಆದೇಶ ನೀಡಿದೆ.
ಜೆಎಂಎಫ್‍ಸಿ ಕೋರ್ಟ್ ನ್ಯಾಯಾಧೀಶೆ ಅನ್ನಪೂರ್ಣೆಶ್ವರಿ ಈ ಆದೇಶ ನೀಡಿದ್ದು, ಮಡಿಕೇರಿ ನಗರ ಪೊಲೀಸರಿಗೆ ಪ್ರಚೋದನೆಯಿಂದಾದ ಆತ್ಮಹತ್ಯೆ ಎಂದು ಕೇಸ್ ದಾಖಲಿಸಿಕೊಳ್ಳಲು ಸೂಚನೆ ನೀಡಿದ್ದಾರೆ.
ಅರ್ಜಿ ವಿಚಾರಣೆ ವೇಳೆ ಗಣಪತಿ ಪುತ್ರ ನೇಹಾಲ್, ಪತ್ನಿ ಪಾವನಾ, ಸಹೋದರ ಮಾಚಯ್ಯ, ಸ್ಥಳೀಯ ವರದಿಗಾರ ಗೋಪಾಲ್‍ರಲ್ಲಿ ಕೋರ್ಟ್ ಅಫಿಡವಿಟ್ ಕೇಳಿದ್ದು, ನೇಹಲ್ ಪರ ವಕೀಲ ಅಮೃತ್ ಸೋಮಯ್ಯ ಇದೇ ಇವರು ಅಫಿಡವಿಟ್ ನೀಡಲಿದ್ದಾರೆ ನ್ಯಾಯಾಧೀಶರಿಗೆ ತಿಳಿಸಿದರು.
ಸಚಿವ ಕೆ.ಜೆ.ಜಾರ್ಜ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎಂ.ಪ್ರಸಾದ್, ಪ್ರಣಬ್ ಮೊಹಂತಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಆದೇಶ ನೀಡಬೇಕೆಂದು ಗಣಪತಿ ಪುತ್ರ ನೇಹಲ್ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು.
The post ಕೆಜೆ ಜಾರ್ಜ್ ವಿರುದ್ಧ ಎಫ್‍ಐಆರ್ ದಾಖಲಿಸಲು ಮಡಿಕೇರಿ ಕೋರ್ಟ್ ಆದೇಶ appeared first on Kannada Public tv.