ಅಂಟ್ಲಾಂಟ: ಮರ ಕಡಿಬೇಕಾದ್ರೆ ಎಷ್ಟೂ ಜಾಗರೂಕತೆ ವಹಿಸಿದ್ರೂ ಕಮ್ಮಿನೇ ಎನ್ನಬಹುದು. ಅದಕ್ಕೆ ಸಾಕ್ಷಿಯೆಂಬಂತೆ ಮರ ಕಡಿಯುತ್ತಿದ್ದಾಗ ಇದ್ದಕ್ಕಿಂದಂತೆ ಮರ ಇಬ್ಭಾಗವಾಗಿದ್ದು, ಪ್ರಾಣ ಉಳಿಸಿಕೊಳ್ಳೋಕೆ ವ್ಯಕ್ತಿ ಎದ್ನೋ ಬಿದ್ನೋ ಎಂಬಂತೆ ಓಡಿದ್ದಾನೆ.
ಇಂತಹದೊಂದು ಘಟನೆ ಜಾರ್ಜಿಯಾದ ಅಟ್ಲಾಂಟದಲ್ಲಿ ನಡೆದಿದ್ದು, ದೈತ್ಯ ಮರವೊಂದನ್ನ ಕಡಿಯೋಕೆ ಮುಂದಾಗಿದ್ದಾಗ ಆ ಮರ ಮೂರು ಭಾಗಗಳಾಗಿ ಬೇರ್ಪಟ್ಟಿದ್ದು, ಮರ ಯಾವ ಕಡೆ ಬೀಳುತ್ತಿದೆ ಎಂದು ಗೊತ್ತಾಗದ ಮರ ಕಡಿಯುವ ಸಿಬ್ಬಂದಿ ತಬ್ಬಿಬ್ಬಾಗ ಪ್ರಾಣ ಉಳಿಸಿಕೊಳ್ಳೋಕೆ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಪೈನ್ ಟ್ರೀ ಎಂದು ಕರೆಸುಕೊಳ್ಳುವ ಈ ಮರವನ್ನ ಚೇರ್ ನಿರ್ಮಾಣ ಮಾಡಲು ಬಳಸುತ್ತಾರೆ ಎನ್ನಲಾಗಿದ್ದು, ಈ ಮರವನ್ನ ಸಿಬ್ಬಂದಿ ಗರಗಸದಿಂದ ಸುತ್ತಲು ಕತ್ತರಿಸಿಕೊಂಡು ಬಂದ್ದಿದ್ದಾನೆ. ಈ ವೇಳೆ ಕೊನೆಯದಾಗಿ ಮರವನ್ನ ಕಡಿಯಬೇಕು ಎನ್ನುವಷ್ಟರಲ್ಲಿ ಮರ ಮೂರು ಭಾಗಗಳಾಗಿ ಮುರಿದುಕೊಂಡಿದೆ. ಅದರಲ್ಲಿ ಒಂದು ಭಾಗ ಎಡಭಾಗದ ಕಡೆ ಬಿದ್ದರೆ, ಇನ್ನೊಂದು ಭಾಗ ಬಲ ಭಾಗದ ಕಡೆ ಬಿದ್ದಿದೆ. ಆಶ್ಚರ್ಯವೆಂಬತೆ ಮಧ್ಯ ಭಾಗ ಹಾಗೇ ನೇರವಾಗಿ ನಿಂತಿದೆ.
The post ಕಡಿಯುತ್ತಿದ್ದ ಮರ ಮೂರು ಭಾಗವಾಯ್ತು ನೋಡಿ! appeared first on Kannada Public tv.