ಕೋಲಾರ: ಇವರನ್ನು ಕಲಿಯುಗದ ದೇವರು ಅಂದ್ರೆ ತಪ್ಪಿಲ್ಲ. ಯಾಕಂದ್ರೆ ಅನಾಥರು, ನಿರ್ಗತಿಕರು, ವಯಸ್ಸಾದವರ ಪಾಲಿನ ತಂದೆ-ತಾಯಿ. ರೋಗಿಗಳು, ಅಂಗವಿಕಲರು, ಬುದ್ದಿಮಾಂಧ್ಯರೇ ಇವರ ಬಂಧು-ಬಳಗ. ಇಷ್ಟೆಲ್ಲಾ ಗುಣಗಳೊಂದಿಗೆ, ಸೇವೆಗೆ ತಮ್ಮ ಜೀವನವನ್ನು ಮುಡುಪಿಟ್ಟಿದ್ದಾರೆ.
ವೈದ್ಯರಾಗಿರುವ ಚಲಪತಿ ನಾಯ್ಡು ಕೋಲಾರ ಜಿಲ್ಲೆಯ ಕೆಜಿಎಫ್‍ನ ಪಾರಾಂಡಹಳ್ಳಿಯಲ್ಲಿ ರಮಣ ಮಹರ್ಷಿ ಎಂಬ ಆಶ್ರಮ ಸ್ಥಾಪಿಸಿದ್ದಾರೆ. ಕಳೆದ 25 ವರ್ಷದಿಂದ ಕುಷ್ಟ ರೋಗಿಗಳು, ಅನಾಥರು, ಮಕ್ಕಳಿಂದ ದೂರಾದ ವೃದ್ಧರಿಗೆ ಆಶ್ರಯ ನೀಡಿದ್ದಾರೆ. ಮದ್ಯವೆಸನಿಗಳು, ಅಂಗವಿಕಲರು, ಬುದ್ದಮಾಂಧ್ಯರು ಹೀಗೆ ನಾನಾ ರೀತಿಯ ಸಮಸ್ಯೆ ಇರುವ ಸುಮಾರು 110ಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಿದ್ದಾರೆ.
25 ವರ್ಷಗಳ ಹಿಂದೆ ಆಕ್ಸಿಡೆಂಟ್‍ನಿಂದಾಗಿ ಇವರ ಮಗ ಮಾನಸಿಕವಾಗಿ ಸಮಸ್ಯೆಗೆ ಒಳಗಾಗಿದ್ರು. ನಂತರ ತಾವೇ ಚಿಕಿತ್ಸೆ ನೀಡಿ ಗುಣಪಡಿಸಿದ್ರು. ಅಂದಿನಿಂದ ಇಂದಿನವರೆಗೂ ಚಲಪತಿ ನಾಯ್ಡು ಅವರ ಸಮಾಜ ಸೇವೆ ನಿಂತಿಲ್ಲ.
ವಿಶೇಷ ಅಂದ್ರೆ ಇಲ್ಲಿ ಎಲ್ಲಾ ಧರ್ಮದವರು ಇರೋದ್ರಿಂದ ಇಲ್ಲಿ ಮಸೀದಿ, ಚರ್ಚ್ ಹಾಗೂ ದೇವಸ್ಥಾನವೂ ಇದೆ. ಇಲ್ಲಿರೋರೆಲ್ಲಾ ಚಲಪತಿ ನಾಯ್ಡು ಅವರ ಮಕ್ಕಳಂತೆ. ಆಶ್ರಮ ಶುರುವಾದ 25 ವರ್ಷಗಳ ಬಳಿಕ ಇತ್ತೀಚಿಗಷ್ಟೇ ಈ ಆಶ್ರಮಕ್ಕೆ ಕೇಂದ್ರ ಸರ್ಕಾರದಿಂದ ಸ್ವಲ್ಪ ಅನುದಾನ ಬರ್ತಿದೆ. ಆದರೆ ಈ ಹಣ 15 ದಿನಕ್ಕೂ ಸಾಕಾಗಲ್ಲ. ರೋಗಿಗಳ ಚಿಕಿತ್ಸೆ, ಔಷಧಿ, ಊಟ, ತಿಂಡಿ, ವಸತಿ ಎಲ್ಲದಕ್ಕೂ ಹಣ ಸಾಕಾಗುತ್ತಿಲ್ಲ.
ಸರ್ಕಾರ ಮಾಡಬೇಕಾದ ಕೆಲಸವನ್ನು ರಮಣ ಮಹರ್ಷಿ ಆಶ್ರಮದ ಮೂಲಕ ನಾಯ್ಡು ಮಾಡ್ತಿದ್ದಾರೆ. ಇವರ ಸಮಾಜಸೇವೆಗೆ ಇನ್ನಷ್ಟು ಮಂದಿ ನೆರವಾದ್ರೆ ಇವರಿಗೂ ನೆಮ್ಮದಿ ಸಿಗುತ್ತೆ.
The post 110 ಅನಾಥರಿಗೆ, ರೋಗಿಗಳಿಗೆ ತಂದೆ-ತಾಯಿ ಈ ಡಾಕ್ಟರ್ appeared first on Kannada Public tv.