Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80042

ಭಾರತೀಯ ವಾಯುಪಡೆಗೆ ಸ್ವದೇಶಿ ಯುದ್ಧ ವಿಮಾನ ತೇಜಸ್ ಸೇರ್ಪಡೆ

$
0
0

 

ನವದೆಹಲಿ: ಸ್ವದೇಶಿ ನಿರ್ಮಿತ ಯುದ್ಧ ವಿಮಾನವನ್ನ ಬಳಕೆ ಮಾಡಬೇಕು ಎಂಬ ಭಾರತೀಯ ವಾಯು ಸೇನೆಯ ಮೂರು ದಶಕಗಳ ಕನಸು ನನಸಾಗಿದ್ದು, ಇಂದು ಬಹುನಿರೀಕ್ಷಿತ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ತೇಜಸ್ ವಾಯುಪಡೆಗೆ ಸೇರಿದೆ.

ಹಿಂದೂಸ್ಥಾನ ಏರೋನ್ಯಾಟಿಕ್ ಲಿಮಿಟೆಡ್ ಈ ಲಘುಯುದ್ಧ ವಿಮಾನವನ್ನು ನಿರ್ಮಿಸಿದೆ. ಇಂದು ಏರ್‍ಮಾರ್ಷಲ್ ಜಸ್ಬೀರ್ ವಾಲಾ ಅವರ ಉಪಸ್ಥಿತಿಯಲ್ಲಿ ಬೆಂಗಳೂರಿನ ಹೆಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮವೊಂದ್ರಲ್ಲಿ 2 ಲಘು ಯುದ್ಧ ವಿಮಾನಗಳು ಭಾರತೀಯ ಸೇನೆಗೆ ನಿಯೋಜನೆಗೊಂಡಿವೆ.

ಫ್ಲೇಯಿಂಗ್ ಡ್ಯಾಗರ್ಸ್ ಎಂಬ ಹೆಸರಿನ ಸೇನಾ ತುಕಡಿಗೆ ನಿಯೋಜನೆಗೊಂಡಿದ್ದು, ಇದು ದೇಶದ ಮೊದಲ ಲಘು ಯುದ್ಧ ವಿಮಾನದ ಸೇನಾತುಕಡಿಯಾಗಿರುವುದು ವಿಶೇಷವಾಗಿದೆ. 33 ವರ್ಷಗಳಿಂದ ಕಾರಣಾಂತರದಿಂದ ವಿಮಾನ ನಿರ್ಮಾಣ ವಿಳಂಬಗೊಂಡಿತ್ತು. ಆದ್ರೆ ಸೇನೆಯಲ್ಲಿ ಬಳಕೆಯಲ್ಲಿರುವ ಮಿಗ್-25 ಬದಲಾಗಿ ತೇಜಸ್ ಸೇರ್ಪಡೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿತ್ತು.

The post ಭಾರತೀಯ ವಾಯುಪಡೆಗೆ ಸ್ವದೇಶಿ ಯುದ್ಧ ವಿಮಾನ ತೇಜಸ್ ಸೇರ್ಪಡೆ appeared first on Kannada Public tv.


Viewing all articles
Browse latest Browse all 80042


<script src="https://jsc.adskeeper.com/r/s/rssing.com.1596347.js" async> </script>