ಕೊಪ್ಪಳ: ಜಿಲ್ಲೆಯಲ್ಲಿ ಖೋಟಾ ನೋಟಿನ ಹಾವಳಿ ಮಿತಿಮೀರಿದ್ದು, ಗಂಗಾವತಿಯಲ್ಲಿ ಖೋಟಾ ನೋಟು ಚಲಾವಣೆ ಮಾಡುವ ಖದೀಮರ ದೊಡ್ಡ ಜಾಲ ಶುರುವಾಗಿದೆ. ಇಲ್ಲಿನ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡರೆ ಹತ್ತರಲ್ಲಿ ಕನಿಷ್ಟ ಒಂದು ನೋಟಾದರು ನಕಲಿ ನೋಟು ಸಿಗುತ್ತೆ.
ಇತ್ತೀಚೆಗೆ ಜಿಲ್ಲೆಯ ಎಟಿಎಂ, ವೈನ್‍ಶಾಪ್, ಕೂಲಿ ಕಾರ್ಮಿಕರಿಗೆ ನೀಡುವ ಹಣದಲ್ಲೂ ನಕಲಿ ನೋಟುಗಳು ಪತ್ತೆಯಾಗ್ತಿವೆ. ಹೆಚ್ಚಾಗಿ 50, 100, 500, 1000 ರೂಪಾಯಿ ಮುಖಬೆಲೆಯ ನಕಲಿ ನೋಟ್‍ಗಳು ಎಗ್ಗಿಲ್ಲದೆ ಚಲಾವಣೆಯಾಗುತ್ತಿವೆ. ಇದ್ರಿಂದ ಭಯಗೊಂಡಿರುವ ಜನ ವ್ಯವಹಾರ ಮಾಡಲು ಹಿಂದೇಟು ಹಾಕ್ತಿದ್ದಾರೆ.
ನಕಲಿ ನೋಟುಗಳ ಹಾವಳಿಯಲ್ಲಿ ಯಾವುದು ಅಸಲಿ, ಯಾವುದು ನಕಲಿ ಎಂಬುದು ಸಾಮಾನ್ಯ ಜನರಿಗೆ ತೋಚದೆ ಮೋಸ ಹೋಗ್ತಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕು ಅಂತಾ ಸ್ಥಳಿಯರು ಆಗ್ರಹಿಸುತ್ತಿದ್ದಾರೆ.
The post ಕೊಪ್ಪಳದಲ್ಲಿ ಎಟಿಎಂನಲ್ಲೂ ಬರ್ತಿವೆಯಂತೆ ಖೋಟಾ ನೋಟು! appeared first on Kannada Public tv.