ಮೆಕ್ಸಿಕೋ ಸಿಟಿ: ಮೆಕ್ಸಿಕೋದ ಟುಲ್ಟೆಪೆಕ್ ಎಂಬಲ್ಲಿ ಮಹಾಗಜವೊಂದರ ತಲೆ ಬುರುಡೆ, ಮತ್ತು ಕಾಲಿನ ಮೂಳೆಗಳು ಸಿಕ್ಕಿವೆ.
ಕಳೆದ ಏಪ್ರಿಲ್‍ನಲ್ಲಿ ಭೂಮಿಯನ್ನು ಅಗೆಯುವಾಗ ತಲೆ ಬುರುಡೆ ಸಿಕ್ಕಿತ್ತು. ಬಳಿಕ ನಿಧಾನವಾಗಿ ಗುಂಡಿ ತೋಡಿ 2 ತಿಂಗಳ ಬಳಿಕ ಮಹಾಗಜದ ತಲೆ ಬುರುಡೆ, ಕಾಲು ಮತ್ತು ಸೊಂಟದ ಮೂಳೆಗಳನ್ನು ನೆಲದಿಂದ ಮೇಲಕ್ಕೆ ಎತ್ತಲಾಗಿದೆ.
ಈ ಮೂಳೆಗಳನ್ನು ನೋಡಿದ ತಜ್ಞರು 14 ಸಾವಿರ ವರ್ಷದ ಹಿಂದಿನ ಮಹಾಗಜರ ಪಳೆಯುಳಿಕೆ ಇದು ಎಂದು ಅಂದಾಜಿಸಿದ್ದಾರೆ. ಸಾಧಾರಣವಾಗಿ ಮಹಾಗಜಗಳು 1 ಸಾವಿರ ಕೆಜಿ ಮತ್ತು 16 ಅಡಿ ಎತ್ತರಕ್ಕೆ ಬೆಳೆಯುತ್ತವೆ.
The post 14 ಸಾವಿರ ವರ್ಷದ ಮಹಾಗಜದ ಪಳೆಯುಳಿಕೆ ಪತ್ತೆ appeared first on Kannada Public tv.