ಪಂಚಾಂಗ
ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಸೋಮವಾರ, ಪೂರ್ವಭಾದ್ರ ನಕ್ಷತ್ರ
ರಾಹುಕಾಲ: ಬೆಳಗ್ಗೆ 7:38 ರಿಂದ 9:14
ಗುಳಿಕಕಾಲ: ಮಧ್ಯಾಹ್ನ 2:02 ರಿಂದ 3:38
ಯಮಗಂಡಕಾಲ: ಬೆಳಗ್ಗೆ 10:50 ರಿಂದ 12:26
ಮೇಷ: ದಾನ-ಧರ್ಮ ಕಾರ್ಯದಲ್ಲಿ ಭಾಗಿ, ಆತ್ಮೀಯರೊಂದಿಗೆ ಕಲಹ, ಮಾನಸಿಕ ನೆಮ್ಮದಿ, ಷೇರು ವ್ಯವಹಾರಗಳಲ್ಲಿ ಲಾಭ, ಉತ್ತಮ ಆದಾಯ.
ವೃಷಭ: ಉತ್ತಮ ಅವಕಾಶ ಪ್ರಾಪ್ತಿ, ಮಕ್ಕಳ ಆರೋಗ್ಯದಲ್ಲಿ ಎಚ್ಚರಿಕೆ, ಮನಸ್ಸಿನಲ್ಲಿ ಆತಂಕ, ವ್ಯಾಪಾರ-ವ್ಯವಹಾರಕ್ಕೆ ಮನಸ್ಸು.
ಮಿಥುನ: ಶತ್ರುಗಳ ಬಾಧೆ, ಸ್ತ್ರೀಯರಿಂದ ಅನುಕೂಲ, ಭಾವನೆಗಳಿಗೆ ಮನ್ನಣೆ, ನಿರೀಕ್ಷಿತ ಆದಾಯ, ತಾಯಿ ಕಡೆಯಿಂದ ಪ್ರಶಂಸೆ.
ಕಟಕ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಲಾಭ, ತಾಳ್ಮೆ ಅತ್ಯಗತ್ಯ, ಹಿರಿಯರೊಂದಿಗೆ ಮಾತುಕತೆ.
ಸಿಂಹ: ಅಧಿಕಾರಿಗಳ ಭೇಟಿ, ಮಾಡುವ ಕಾರ್ಯದಲ್ಲಿ ಜಯ, ಬಿಡುವಿಲ್ಲದ ಕೆಲಸಗಳು, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.
ಕನ್ಯಾ: ಸೇವಕರಿಂದ ತೊಂದರೆ, ಋಣ ಬಾಧೆ, ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರದಲ್ಲಿ ಲಾಭ.
ತುಲಾ: ಕೆಲಸ ಕಾರ್ಯಗಳಲ್ಲಿ ವಿಘ್ನ, ಆಕಸ್ಮಿಕ ಧನ ನಷ್ಟ, ಮನಃಕ್ಲೇಷ, ಬಂಧುಗಳಿಂದ ನಿಂದನೆ.
ವೃಶ್ಚಿಕ: ಮಾನಸಿಕ ಚಿಂತೆ, ಆರೋಗ್ಯದಲ್ಲಿ ಏರುಪೇರು, ಕೃಷಿಯಲ್ಲಿ ಅಲ್ಪ ಲಾಭ, ಕೋರ್ಟ್ ಕೇಸ್‍ಗಳಿಗೆ ಓಡಾಟ.
ಧನಸ್ಸು: ಆಸ್ತಿ ವಿಚಾರದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಮಾನಸಿಕ ಕಿರಿಕಿರಿ, ವಾಹನ ಖರೀದಿ, ಅಧಿಕ ತಿರುಗಾಟ.
ಮಕರ: ಮಾತಿನ ಮೇಲೆ ಹಿಡಿತವಿರಲಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಋಣ ವಿಮೋಚನೆ.
ಕುಂಭ: ಕಾರ್ಯದಲ್ಲಿ ವಿಳಂಬ, ಚಂಚಲ ಮನಸ್ಸು, ಉತ್ತಮ ಬುದ್ಧಿ ಶಕ್ತಿ, ಶತ್ರುಗಳ ಕಾಟ, ಅನಾರೋಗ್ಯ, ವ್ಯಾಪಾರದಲ್ಲಿ ಲಾಭ.
ಮೀನ: ಅನ್ಯರಿಗೆ ಉಪಕಾರ ಮಾಡುವಿರಿ, ಶೀತ ಸಂಬಂಧಿತ ಸಮಸ್ಯೆ, ಮನಸ್ಸಿಗೆ ನೆಮ್ಮದಿ, ವಾಹನ ಚಾಲನೆಯಲ್ಲಿ ಎಚ್ಚರ.
The post ದಿನಭವಿಷ್ಯ 27-06-2016 appeared first on Kannada Public tv.