ಮುಂಬೈ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದ ಸೆಟ್ ನಿರ್ಮಾಣ ಮಾಡುವ ವೇಳೆಯಲ್ಲಿ ಪೇಂಟರ್ ಮೇಲಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.
ಮುಖೇಶ್ ಡಾಕಿಯಾ (34) ಪ್ರಾಣ ಕಳೆದುಕೊಂಡ ಕಾರ್ಮಿಕನಾಗಿದ್ದಾನೆ. ಫಿಲ್ಮ್ ಸಿಟಿಯಲ್ಲಿ ಪದ್ಮಾವತಿ ಚಿತ್ರದ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಪೇಂಟಿಂಗ್ ಮಾಡುವ ವೇಳೆಯಲ್ಲಿ ಮುಖೇಶ್ 5 ಅಡಿ ಎತ್ತರದಿಂದ ಕೆಳಗೆ ಬೀಳಲ್ಪಟ್ಟಿದ್ದಾರೆ.
ಈ ಸಂಬಂಧ ಅರೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆಯನ್ನು ನಡೆಸುತ್ತಿದ್ದು, ಚಿತ್ರತಂಡವನ್ನ ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಇದುವರೆಗೂ ಚಿತ್ರತಂಡದವರು ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಪೇಂಟ್ ಮಾಡುವ ವೇಳೆಯಲ್ಲಿ ಮುಖೇಶ್ ಸುರಕ್ಷತಾ ಕ್ರಮಗಳನ್ನು ಬಳಸದೇ ಎತ್ತರದಲ್ಲಿ ಪೇಂಟ್ ಮಾಡುವಾಗ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಸುರಕ್ಷತಾ ಕ್ರಮಗಳನ್ನು ಅಲಕ್ಷಿಸಿದರಿಂದಾಗಿ ಮುಖೇಶ್ ಪ್ರಾಣ ಕಳೆದುಕೊಂಡಿದ್ದಾರೆ. ಸಾವನ್ನಪ್ಪಿದ ಮುಖೇಶ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬನ್ಸಾಲಿ ಪ್ರೊಡಕ್ಷನ್ ಸಿಇಓ ಶೋಭಾ ಸಂತಾ, ಇದೊಂದು ಆಕಸ್ಮಿಕವಾಗಿ ನಡೆದಂತಹ ಘಟನೆ ಆಗಿದೆ. ಸೆಟ್‍ನಲ್ಲಿ ಮೃತಪಟ್ಟಿರುವ ವ್ಯಕ್ತಿಗೆ ನಾವು ಸಹಾಯ ಮಾಡುತ್ತೇವೆ ಎಂದು ಹೇಳಿದ್ದಾರೆ.
ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಮತ್ತು ಶಾಹೀದ್ ಕಪೂರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ಐತಿಹಾಸಿಕ ರಾಣಿ ಪದ್ಮಾವತಿಯ ಕಥೆಯನ್ನು ಒಳಗೊಂಡಿದೆ.