ಬೆಂಗಳೂರು: ಮಹಿಳಾ ಉದ್ಯೋಗಿಗಳು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಕರ್ನಾಟಕ ಸರ್ಕಾರ ಅನುಮತಿ ಕೊಟ್ಟಿದೆ.
ಈ ಸಂಬಂಧ ರಾಜ್ಯ ಸರ್ಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿ ಅಧಿಸೂಚನೆ ಪ್ರಕಟ ಮಾಡಿದೆ. ಇದರಿಂದಾಗಿ ಮಹಿಳೆಯರಿಗೆ ಸಂಜೆ 7ರ ನಂತರ ಕೆಲಸ ಮಾಡಲು ಇದ್ದ ಅಡ್ಡಿ ಕೊನೆಗೊಂಡಿದೆ. ಪಬ್ ಬಾರ್‍ಗಳಲ್ಲಿಯೂ ಮಹಿಳೆಯರಿಗೆ ರಾತ್ರಿ ಪಾಳಿಗೆ ಅವಕಾಶ ನೀಡಿ, 15 ಷರತ್ತುಗಳನ್ನ ಹಾಕಲಾಗಿದೆ.
ಮಹಿಳಾ ಉದ್ಯೋಗಿಗಳಿಗೆ ಸೂಕ್ತ ಭದ್ರತೆ, ಸಾರಿಗೆ ವ್ಯವಸ್ಥೆ, ರಾತ್ರಿಪಾಳಿಯಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರು ಇರಲೇಬೇಕು. ಶಿಶುಪಾಲನಾ ಕೇಂದ್ರ ಹಾಗೂ ಮಹಿಳಾ ಉದ್ಯೋಗಿಗಳ ಸಮ್ಮತಿ ಪತ್ರ ಕೂಡ ಕಡ್ಡಾಯಗೊಳಿಸಿದೆ. ನಿಯಮ ಪಾಲಿಸದ ಉದ್ದಿಮೆಗಳ ಲೈಸೆನ್ಸ್ ಕೂಡ ರದ್ದಾಗಲಿದೆ.