ಚೆನ್ನೈ: ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಅವರ ಸಾವಿನ ವ್ಯಥೆಯನ್ನು ಭರಿಸಲಾಗದೆ ಇದುವರೆಗೆ 597 ಮಂದಿ ಸಾವನ್ನಪ್ಪಿದ್ದಾರೆ ಎಂದು ಎಐಎಡಿಎಂಕೆ ಹೇಳಿದೆ.
ಎಐಎಡಿಎಂಕೆ ಪಕ್ಷದ ಟ್ವಿಟ್ಟರ್ ಖಾತೆಯಲ್ಲಿ 597 ಸಾವಿನ ಅಧಿಕೃತ ಘೋಷಣೆಯಾಗಿದೆ. ಪುರಚ್ಚಿ ತಲೈವಿ ಅಮ್ಮಾ ಅವರ ನಿಧನ ದುಃಖ ತಾಳಲಾರದೇ 597 ಮಂದಿ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ಟ್ವೀಟ್‍ನಲ್ಲಿ ಹೇಳಲಾಗಿದೆ.
ಇದಲ್ಲದೆ ಎಐಎಡಿಎಂಕೆ ಪಕ್ಷ ಅಧಿಕೃತವಾಗಿ 597 ಮಂದಿಯ ಪಟ್ಟಿಯನ್ನೂ ಸಿದ್ಧಪಡಿಸಿದೆ.
ಕಳೆದ ಸೆಪ್ಟೆಂಬರ್ 22ರಂದು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ 68 ವರ್ಷದ ಜಯಲಲಿತಾ ಅವರಿಗೆ ಡಿಸೆಂಬರ್ 4ರಂದಯ ಹೃದಯಾಘಾತವಾಗಿತ್ತು. ಡಿಸೆಂಬರ್ 5ರಂದು ಜಯಲಲಿತಾ ನಿಧನ ಹೊಂದಿದ್ದರು.
ಡಿಸೆಂಬರ್ 11ರಂದು ಎಐಎಡಿಎಂಕೆ 470 ಮಂದಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿತ್ತು. ತಮ್ಮ ನೆಚ್ಚಿನ ನಾಯಲಿ ಜಯಲಲಿತಾ ಸಾವಿನ ಶಾಕ್ ಹಾಗೂ ದುಃಖ ತಾಳಲಾರದೇ ಅಭಿಮಾನಿಗಳು ಸಾವನ್ನಪ್ಪಿದ್ದಾರೆ ಎಂದು ಎಐಎಡಿಎಂಕೆ ಹೇಳಿದೆ.