Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80415

3ನೇ ಪಂದ್ಯದಲ್ಲೇ ಕನ್ನಡಿಗ ಕರುಣ್ ದ್ವಿಶತಕ

$
0
0

ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ 1 ರನ್‍ನಿಂದ ದ್ವಿಶತಕದಿಂದ ವಂಚಿತರಾದರೂ ಇಂದು ಕರುಣ್ ನಾಯರ್ ಚೊಚ್ಚಲ ದ್ವಿಶತಕ ಬಾರಿಸುವ ಮೂಲಕ ಕರ್ನಾಟಕಕ್ಕೆ ಹೆಮ್ಮೆ ತಂದಿದ್ದಾರೆ.

ಮೂರನೇ ದಿನದ ಅಂತ್ಯಕ್ಕೆ 71 ರನ್‍ಗಳಿಸಿದ್ದ ಕರುಣ್ ನಾಯರ್ ಇಂದು ಮಧ್ಯಾಹ್ನ 306 ಎಸೆತದಲ್ಲಿ 200 ರನ್( 23 ಬೌಂಡರಿ, 1ಸಿಕ್ಸರ್) ಹೊಡೆಯುವ ಮೂಲಕ ಭಾರತದ ಬೃಹತ್ ಮೊತ್ತ ಪೇರಿಸುತ್ತಿದೆ. 25 ವರ್ಷದ ಕರಣ್ ನಾಯರ್ 3ನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

ಭಾನುವಾರ ಕೆ ಎಲ್ ರಾಹುಲ್ ಜೊತೆ 4ನೇ ವಿಕೆಟ್‍ಗೆ 161 ರನ್ ಜೊತೆಯಾಟವಾಡಿದ್ದ ನಾಯರ್ ಇಂದು ಆರನೇ ವಿಕೆಟ್‍ಗೆ ಅಶ್ವಿನ್ ಜೊತೆ 181 ರನ್ ಗಳ ಜೊತೆಯಾಟವಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕರುಣ್ ನಾಯರ್ ಈಗ ಟ್ರೆಂಡಿಂಗ್ ಆಗಿದ್ದಾರೆ. ಇತ್ತೀಚಿನ ವರದಿ ಬಂದಾಗ ಭಾರತ 170 ಓವರ್‍ಗಳಲ್ಲಿ 6 ವಿಕೆಟ್ ನಷ್ಟಕ್ಕೆ 616 ರನ್‍ಗಳಿಸಿದೆ. ಕರುಣ್ ನಾಯರ್ 216 ರನ್ ಗಳಿಸಿ ಕ್ರೀಸ್‍ನಲ್ಲಿದ್ದರೆ ಆರ್ ಅಶ್ವಿನ್ 67 ರನ್‍ಗಳಿಸಿ ಔಟಾಗಿದ್ದಾರೆ.

1991ರ ಡಿಸೆಂಬರ್ 6ರಂದು ರಾಜಸ್ತಾನ ಜೋಧ್‍ಪುರದಲ್ಲಿ ಜನಿಸಿದ ಕರುಣ್ ನಾಯರ್ ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್‍ನಲ್ಲಿ ರಾಜಸ್ತಾನ ರಾಯಲ್ಸ್, ಡೆಲ್ಲಿ ಡೇರ್ ಡೇವಿಲ್ಸ್, ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದಾರೆ. ಕೆಪಿಎಲ್‍ನಲ್ಲಿ ಮಂಗಳೂರು ಯುನೈಟೆಡ್ ತಂಡವನ್ನು ಪ್ರತಿನಿಧಿಸಿದ್ದಾರೆ.

 

 

 


Viewing all articles
Browse latest Browse all 80415