ಬೆಂಗಳೂರು: ಯುವತಿಯರಿಗೆ ವಂಚಿಸುತ್ತಿದ್ದ ವ್ಯಕ್ತಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟ ಘಟನೆ ನಗರದ ನಾಗರಬಾವಿಯ ಬಿಡಿಎ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಈಗಾಗಲೇ ಮೂವರನ್ನ ಮದುವೆಯಾಗಿರುವ ವಜ್ರೇಶ್, ಮತ್ತೆ ಐವರು ಯುವತಿಯರಿಗೆ ಮದುವೆಯಾಗುವುದಾಗಿ ವಂಚನೆ ಮಾಡಿದ್ದಾನೆ. ಈ ಬಗ್ಗೆ ಮೂರನೇ ಪತ್ನಿಗೆ ವಿಷಯ ತಿಳಿದು ಇಂದು ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಇದರಿಂದ ಹೆದರಿ ವಜ್ರೇಶ್ ಮನೆಯೊಳಗೆ ಸೇರಿಕೊಂಡಿದ್ದನು. ಆದರೆ ಪೊಲೀಸರು ಈತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಈತ ಗೋಪಾಲನ್ ಮಾಲ್ ಬಳಿ ಹೋಗಿ ಶಾಪಿಂಗ್ ಗೆ ಬರ್ತಾ ಇದ್ದ ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಮೊದಲನೇ ಪತ್ನಿಗೆ ವಿಚ್ಛೇದನ ನೀಡಿದ್ದ. 2ನೇ ಪತ್ನಿಯಿಂದಲೂ ದೂರವಿದ್ದ. ಈಗ 3ನೇ ಹೆಂಡತಿನ್ನೂ ಬಿಟ್ಟು 4ನೇ ಮದುವೆಗೆ ಸಿದ್ಧವಾಗಿದ್ದ ಎನ್ನಲಾಗಿದೆ.
The post ಮೂವರು ಹೆಂಡ್ತೀರು, ಐವರು ಯುವತಿಯರಿಗೆ ವಂಚಿಸಿದ ಭೂಪನಿಗೆ ಥಳಿತ appeared first on Kannada Public tv.