ಚಿಕ್ಕಬಳ್ಳಾಪುರ: ಸಂಸಾರದ ನೌಕೆಯಲ್ಲಿ ಗಂಡ ಹೆಂಡತಿ ಇಬ್ಬರು ಸಮ ಪಾಲುದಾರರು. ಸುಖ ದುಃಖದಲ್ಲಿ ಇಬ್ಬರೂ ಒಟ್ಟಾಗಿ ಜೀವನ ಸಾಗಿಸ್ಬೇಕು. ಇಬ್ಬರಲ್ಲಿ ಒಬ್ಬರು ದಾರಿ ತಪ್ಪಿದ್ರೂ ಆ ಸಂಸಾರ ಸ್ಮಶಾನವಾಗುತ್ತೆ. ಚಿಕ್ಕಬಳ್ಳಾಪುರದಲ್ಲಿ ಆಗಿದ್ದು ಅದೇ.
ಕುಡಿದ ನಶೆಯಲ್ಲಿದ್ದ ಪತಿಮಹಾಶಯ ತನ್ನ ಹೆಂಡತಿಯ ಎರಡು ಕಣ್ಣುಗಳನ್ನ ಕಿತ್ತು ಹಾಕೋಕೆ ಹೋಗಿದ್ದಾನೆ. ಎರಡು ಕಣ್ಣುಗಳ ಮೇಲೆ ಕೈಯಿಂದ ಗುದ್ದಿ ಗುದ್ದಿ ಕಣ್ಣುಗಳನ್ನೇ ಕಾಣದಂತೆ ಮಾಡಿದ್ದಾನೆ.
ಚಿಕ್ಕಬಳ್ಳಾಪುರ ತಾಲೂಕು ಹುನೇಗಲ್ ಗ್ರಾಮದ ವೆಂಕಟೇಶಪ್ಪ ಇಂಥಾ ಕೃತ್ಯವೆಸಗಿರುವ ರಾಕ್ಷಸ. ಗಂಡ ವೆಂಕಟೇಶಪ್ಪ ಕುಡುಕ, ಸಂಸಾರಕ್ಕೆ ಆಸರೆಯಾಗ್ತಿಲ್ಲ ಅಂತ ಮಂಜುಳಾ ಪರಪುರುಷನ ಜೊತೆ ದೇಹ ಹಂಚಿಕೊಂಡಿದ್ಲು. ನಿನ್ನೆ ಸಂಜೆ ಈಕೆ ರೆಡ್‍ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ. ಆಗ ಸಿಟ್ಟಿಗೆದ್ದ ವೆಂಕಟೇಶಪ್ಪ ಪತ್ನಿ ಮಂಜುಳಾಳನ್ನ ಮನಬಂದಂತೆ ಹೊಡೆದು ಆಕೆಯ ಎರಡು ಕಣ್ಣುಗಳನ್ನ ಕೀಳೋ ನೀಚ ಕೃತ್ಯಕ್ಕೆ ಕೈ ಹಾಕಿದ್ದಾನೆ.
ಮಾರಣಾಂತಿಕ ಹಲ್ಲೆಗೊಳಗಾದ ಮಂಜುಳಾಗೆ ಈಗ ಎರಡು ಕಣ್ಣುಗಳು ಕಾಣುತ್ತಿಲ್ಲ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಿಂಟೋ ಕಣ್ಣಾಸ್ಪತ್ರೆಗೆ ಆಕೆಯನ್ನ ದಾಖಲಿಸಲಾಗಿದೆ. ಹೆಂಡತಿಯ ಕಣ್ಣು ಜಜ್ಜಿದ ಪಾಪಿ ಗಂಡ ವೆಂಕಟೇಶಪ್ಪ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ವಶದಲ್ಲಿದ್ದಾನೆ.
The post ಅನೈತಿಕ ಸಂಬಂಧ ಹೊಂದಿದ ಪತ್ನಿಯ ಕಣ್ಣು ಕಿತ್ತ ಕುಡುಕ ಪತಿ appeared first on Kannada Public tv.