Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80535

ರಾಹುಲ್ ಗಾಂಧಿ ಆಯ್ತು, ಈಗ ಕಾಂಗ್ರೆಸ್‍ನ ಟ್ವಿಟ್ಟರ್ ಅಕೌಂಟ್ ಕೂಡ ಹ್ಯಾಕ್

$
0
0

ನವದೆಹಲಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ಟ್ವಿಟ್ಟರ್ ಖಾತೆ ಹ್ಯಾಕ್ ಆದ ಬೆನ್ನಲ್ಲೇ ಇದೀಗ ಕಾಂಗ್ರೆಸ್‍ನ ಅಧಿಕೃತ ಟ್ವಿಟ್ಟರ್ ಖಾತೆ @INCIndia ಕೂಡ ಹ್ಯಾಕ್ ಆಗಿದೆ. ಖಾತೆಯನ್ನ ಹ್ಯಾಕ್ ಮಾಡಿ ನಿಂದನಾತ್ಮಕ ಟ್ವೀಟ್‍ಗಳನ್ನು ಪೋಸ್ಟ್ ಮಾಡಿದ್ದಾರೆ.

ಟ್ವೀಟ್‍ಗಳು ಬಂದ 30 ನಿಮಿಷದೊಳಗೆ ಅದನ್ನ ಡಿಲೀಟ್ ಮಾಡಲಾಗಿದ್ದು ಈ ಬಗ್ಗೆ ದೆಹಲಿಯ ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ. ಈ ಕೃತ್ಯದ ಹಿಂದೆ ಯಾರ ಕೈವಾಡವಿದೆ ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ.

congress-twitter

ಬುಧವಾರ ರಾತ್ರಿಯಷ್ಟೇ ರಾಹುಲ್ ಗಾಂಧಿಯ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್ ಮಾಡಿ 8 ನಿಂದನಾತ್ಮಕವಾದ ಟ್ವೀಟ್‍ಗಳನ್ನ ಪೋಸ್ಟ್ ಮಾಡಿದ್ದರು. 1 ಗಂಟೆಯೊಳಗೆ ಆ ಟ್ವೀಟ್‍ಗಳನ್ನು ಡಿಲೀಟ್ ಮಾಡಲಾಗಿದ್ದು ರಾಹುಲ್ ಗಾಂಧಿ ಅವರ ಟ್ವಿಟ್ಟರ್ ಖಾತೆಯನ್ನು ರಿಸ್ಟೋರ್ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಗೆ ಈಗಾಗಲೇ ಸುಮಾರು 13 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ ಹಾಗೂ ರಾಹುಲ್ ಗಾಂಧಿ(@OfficeofRG) ಅಧಿಕೃತ ಖಾತೆಯಲ್ಲಿ 12 ಲಕ್ಷಕ್ಕೂ ಫಾಲೋವರ್ಸ್ ಇದ್ದಾರೆ

ಇದನ್ನೂ ಓದಿ: ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಹ್ಯಾಕ್


Viewing all articles
Browse latest Browse all 80535

Trending Articles



<script src="https://jsc.adskeeper.com/r/s/rssing.com.1596347.js" async> </script>