ರಾಯಚೂರು: ಡಿಸೆಂಬರ್ 2ರಿಂದ ಮೂರು ದಿನ ರಾಯಚೂರಿನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆದರೆ ಆರಂಭದಲ್ಲೇ ಸಮ್ಮೇಳನಕ್ಕೆ ವಿವಾದ ಅಂಟಿಕೊಂಡಿದೆ. ಸಮ್ಮೇಳನದ ಯಶಸ್ವಿಗಾಗಿ ವಂತಿಗೆ ರೂಪದಲ್ಲಿ ಸರ್ಕಾರಿ ನೌಕರರ ಒಂದು ದಿನದ ಸಂಬಳವನ್ನ ಕಟ್ ಮಾಡಿದ್ದಾರೆ. ಅಷ್ಟೇ ಅಲ್ಲ ಈ ಹಣ ಎನ್‍ಜಿಓ ಒಂದಕ್ಕೆ ಪಾಲಾಗಿದೆ ಅನ್ನೋದು ಲೇಟೆಸ್ಟ್ ಸುದ್ದಿ.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಂತಿಗೆಯಾಗಿ ರಾಯಚೂರು ಜಿಲ್ಲೆಯ ಎಲ್ಲಾ ಸರ್ಕಾರಿ ನೌಕರರ ಒಂದು ದಿನದ ವೇತನವನ್ನ ಪಡೆಯಲಾಗಿದೆ. ಒಂದು ದಿನದ ವೇತನದ ಅಂದಾಜು 1 ಕೋಟಿ 25 ಲಕ್ಷ ರೂಪಾಯಿ. ಈ ಹಣದಲ್ಲಿ ಶೇಕಡಾ 70 ರಷ್ಟನ್ನು ಮಾತ್ರ ಸಮ್ಮೇಳನಕ್ಕೆ ಬಳಸ್ತಿದ್ದಾರೆ. ಉಳಿದ 30ರಷ್ಟು ಹಣ ಸರ್ಕಾರೇತರ ಸಂಸ್ಥೆಗೆ ನೀಡುತ್ತಿದ್ದಾರೆ. ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿಗಳೇ ಈ ಬಗ್ಗೆ ಆದೇಶ ಹೊರಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನ ಪುನರ್ ನಿರ್ಮಾಣಕ್ಕೆ ಎನ್‍ಜಿಓ ಸಂಸ್ಥೆಗೆ ನೀಡಲು ನಿರ್ಧರಿಸಲಾಗಿದೆ.
ಸಮ್ಮೇಳನಕ್ಕೆ ರಾಜ್ಯ ಸರ್ಕಾರ ಒಟ್ಟು 4 ಕೋಟಿ ರೂ. ಹಣ ನೀಡಿದೆ. ಈಗಾಗಲೇ 2 ಕೋಟಿ ರೂ. ಹಣ ಬಿಡುಗಡೆಯೂ ಆಗಿದೆ. ಇನ್ನು ಸಾರ್ವಜನಿಕರಿಂದ ಅಂದಾಜು 80 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ. ಜೊತೆಗೆ ಸರ್ಕಾರಿ ನೌಕರರ ದಿನದ ವೇತನ ಒಂದೂಕಾಲು ಕೋಟಿ ರೂ. ಅಲ್ಲಿಗೆ 8 ಕೋಟಿ ರೂಪಾಯಿಗೂ ಹೆಚ್ಚು. ಇಷ್ಟು ಹಣ ಬೇಕಿತ್ತಾ ಅನ್ನೋ ಶಿಕ್ಷಕರು ಸರ್ಕಾರೇತರ ಸಂಸ್ಥೆಗೆ ಶೇಕಡಾ 30 ರಷ್ಟು ಹಣ ನೀಡುತ್ತಿರುವುದನ್ನ ಸರ್ಕಾರಿ ನೌಕರರೇ ವಿರೋಧಿಸುತ್ತಿದ್ದಾರೆ.