Quantcast
Channel: Public TV – Latest Kannada News, Public TV Kannada Live, Public TV News
Viewing all articles
Browse latest Browse all 80012

ಮೀಟ್ ಬಾಲ್ಸ್/ಖೈಮಾ ಉಂಡೆ ಮಾಡಲು ಇಲ್ಲಿದೆ ಸುಲಭ ವಿಧಾನ

$
0
0

kannada cooking recipes/non-veg/ meet balls recipe in indian style

ಮೀಟ್ ಬಾಲ್ಸ್ ಅಥವಾ ಖೈಮಾ ಉಂಡೆಗಳನ್ನು ಕುರಿ ಅಥವಾ ಮೇಕೆಯ ಮಟನ್ ಬಳಸಿ ಮಾಡಬಹುದು. ಇದನ್ನು ಎಣ್ಣೆಯಲ್ಲಿ ಕರಿದು ಮಟನ್ ಸಾಂಬಾರ್‍ಗೆ ಹಾಕಿ ಖೈಮಾ ಸಾಂಬಾರ್ ಕೂಡ ತಯಾರಿಸಿಬಹುದು. ಅಥವಾ ಹಾಗೇ ಮೀಟ್ ಬಾಲ್ಸ್ ತಯಾರಿಸಿ ಸ್ಪೆಗೆಟ್ಟಿ(ನೂಡಲ್ಸ್) ಜೊತೆ ತಿನ್ನಬಹುದು.

ಬೇಕಾಗುವ ಸಾಮಗ್ರಿಗಳು:
1. ಮಟನ್ – 1/4 ಕೆಜಿ (ಖೈಮಾಗಾಗಿ ಸಣ್ಣಗೆ ಕತ್ತರಿಸಿದ್ದು ಅಥವಾ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಬಹುದು)
2. ಶುಂಠಿ ಬೆಳ್ಳುಳ್ಳಿ ಪೇಸ್ಟ್- 2 ಚಮಚ
4. ಈರುಳ್ಳಿ ಪೇಸ್ಟ್ – 2 ಚಮಚ
5. ಕಾಳುಮೆಣಸಿನ ಪುಡಿ- 1/2 ಚಮಚ
6. ಟೊಮ್ಯಾಟೋ ಪೇಸ್ಟ್- 4 ಚಮಚ
7. ಮೊಟ್ಟೆ- 1
8. ಎಣ್ಣೆ- ಕರಿಯಲು
9. ಉಪ್ಪು- 1/2 ಚಮಚ
10. ಖಾರದ ಪುಡಿ- 1/2 ಚಮಚ

ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ ಕತ್ತರಿಸಿದ ಮಟನ್ ಹಾಕಿ ಅದಕ್ಕೆ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕಾಳುಮೆಣಸಿನ ಪುಡಿ, ಖಾರದ ಪುಡಿ, ಉಪ್ಪು ಮತ್ತು ಮೊಟ್ಟೆ ಹಾಕಿ ಚೆನ್ನಾಗಿ ಕಲಸಿ.
* ನಂತರ ಖೈಮಾ ಮಿಶ್ರಣವನ್ನು ತೆಗೆದುಕೊಂಡು ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ 15 ನಿಮಿಷ ಫ್ರಿಡ್ಜ್‍ನಲ್ಲಿಡಿ.
* ಒಂದು ಪ್ಯಾನ್‍ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಅದಕ್ಕೆ ಸ್ವಲ್ಪ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಈರುಳ್ಳಿ ಪೇಸ್ಟ್, ಟೊಮ್ಯಾಟೋ ಪೇಸ್ಟ್ ಮತ್ತು ಉಪ್ಪು ಹಾಕಿ ಚೆನ್ನಾಗಿ ಕುದಿಸಿ ಸಾಸ್ ತಯಾರಿಸಿಕೊಳ್ಳಿ.
* ಒಂದು ಪ್ಯಾನ್‍ಗೆ ಉಂಡೆಗಳು ಮುಳುಗುವಷ್ಟು ಎಣ್ಣೆ ಹಾಕಿ ಅದು ಬಿಸಿಯಾದ ನಂತರ ಖೈಮಾ ಉಂಡೆಗಳನ್ನು ಹಾಕಿ ಕಂದು ಬಣ್ಣ ಬರುವವರೆಗೂ ಕಡಿಮೆ ಉರಿಯಲ್ಲಿ ಕರಿಯಿರಿ.
* ಹೀಗೆ ಎಲ್ಲಾ ಉಂಡೆಗಳನ್ನೂ ಕರಿದ ನಂತರ ಅದನ್ನು ತಯಾರಿಸಿಟ್ಟುಕೊಂಡ ಸಾಸ್‍ನಲ್ಲಿ ಹಾಕಿ ಒಮ್ಮೆ ಬಾಡಿಸಿ ಒಲೆಯಿಂದ ಕೆಳಗಿಳಿಸಿದರೆ ಮೀಟ್ ಬಾಲ್ಸ್ ರೆಡಿ.
* ಇದನ್ನು ಬಿಸಿಯಾದ ಅನ್ನದ ಜೊತೆ ಅಥವಾ ನೂಡಲ್ಸ್ ಜೊತೆ ಸೇವಿಸಬಹುದು.

kannada cooking recipes/non-veg/ meet balls with spegetti recipe in indian style


Viewing all articles
Browse latest Browse all 80012