ಮುಂಬೈ: ಬಾಲಿವುಡ್‍ನ ಸೂಪರ್ ಹಿಟ್ ಸಿನಿಮಾ ಧೂಮ್ ಜಗತಿನಾದ್ಯಂತ ಮೂರು ಸರಣಿಗಳಲ್ಲಿ ತೆರೆಕಂಡು ಯಶಸ್ವಿ ಪ್ರದರ್ಶನಗೊಂಡಿದೆ. ಈಗ ಮತ್ತೊಮ್ಮೆ ಧೂಮ್‍ನ ನಾಲ್ಕನೇ ಆವೃತ್ತಿ ಬರಲು ರೆಡಿಯಾಗುತ್ತಿದೆ. ಈಗಾಗಲೇ ತೆರೆಕಂಡಿರುವ ಧೂಮ್‍ನ ಮೂರು ಚಿತ್ರಗಳಲ್ಲೂ ಅಭಿಷೇಕ್ ಬಚ್ಚನ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದರು.
ಈಗ ಧೂಮ್‍ನ ನಾಲ್ಕನೇ ಆವೃತ್ತಿಯ ಸಿನಿಮಾದಿಂದ ಅಭಿಷೇಕ್ ಬಚ್ಚನ್‍ರನ್ನಿ ಸಿನಿಮಾದಿಂದ ಕೈ ಬಿಡಲಾಗಿದೆ ಎಂಬ ಸುದ್ದಿಯೊಂದು ಹರದಾಡುತ್ತಿದೆ. ಮತ್ತೊಂದು ಸಿನಿಮಾ ಹೇರಾ ಪೇರಿ ಚಿತ್ರದಿಂದಲೂ ಅಭಿಷೇಕ್‍ರನ್ನು ಕೈಬಿಡಲಾಗಿದೆ ಎಂಬ ಗಾಳಿಸುದ್ದಿಗಳು ಹರದಾಡುತ್ತಿವೆ.
ಧೂಮ್-4 ಮತ್ತು ಫಿರ್ ಹೇರಾ ಪೇರಿ -3 ಚಿತ್ರಗಳ ಕುರಿತು ಪ್ರತಿಕ್ರಿಯಿಸಿರುವ ನಟ ಅಭಿಷೇಕ್ ಬಚ್ಚನ್ ಸದ್ಯ ಧೂಮ್-4 ಮತ್ತು ಫಿರ್ ಹೇರಾ ಫೇರಿ ಚಿತ್ರಗಳು ಇನ್ನೂ ಆರಂಭಗೊಂಡಿಲ್ಲ ಎಂದು ತಿಳಿಸಿದ್ದಾರೆ. ಧೂಮ್ -4 ಚಿತ್ರದಲ್ಲಿ ನಿರ್ದೇಶಕ ಆದಿತ್ಯಾ ಚೋಪ್ರಾ ಸಾಕಷ್ಟು ಚಿತ್ರದಲ್ಲಿ ಬದಲಾವಣೆ ಮಾಡುತ್ತಿದ್ದಾರೆ. ಕೊನೆಯ ಧೂಮ್ ಮಾಡಿದ ವಿಕ್ಟರ್ ಆಚಾರ್ಯ ಕೂಡ ಬೇರೆ ಸಿನಿಮಾದಲ್ಲಿ ಬ್ಯೂಸಿ ಆಗಿದ್ದಾರೆ ಎಂದು ಹೇಳಿದರು.
ಇನ್ನೂ ನನಗೆ ಧೂಮ್ ಚಿತ್ರದ ಸ್ಕ್ರಿಪ್ಟ್ ನನಗೆ ತಲುಪಿಲ್ಲ. ಹಾಗಾಗಿ ನನಗೆ ಧೂಮ್ ಚಿತ್ರದ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ. ಇತ್ತ ಧೂಮ್-4 ಸಿನಿಮಾಕ್ಕಾಗಿ ನಾಯಕನ ಹುಡುಕಾಟ ನಡೆದಿದೆ. ಈಗಾಗಲೇ ಬಾಹುಬಲಿ ಹೀರೋ ಟಾಲಿವುಡ್ ಪ್ರಭಾಸ್ ನಾಯಕನ ರೇಸ್‍ನಲ್ಲಿದ್ದಾರೆ. ಇವರ ಜೊತೆ ಹೃತಿಕ್ ರೋಷನ್ ಮತ್ತು ಶಾರುಖ್ ಖಾನ್‍ರ ಹೆಸರುಗಳು ಕೇಳಿ ಬರುತ್ತಿವೆ.