ಬೆಂಗಳೂರು: ರಕ್ಷಿತ್ ಶೆಟ್ಟಿ ಅಭಿನಯದ ಕಿರಿಕ್ ಪಾರ್ಟಿ ಸಿನೆಮಾದ ಸಾಂಗ್ ಈಗ ಯೂಟ್ಯೂಬಲ್ಲಿ ಸದ್ದು ಮಾಡ್ತಿದೆ. ನವೆಂಬರ್ 17ರಂದು ಯೂಟ್ಯೂಬಲ್ಲಿ ರಿಲೀಸ್ ಆದ ‘ತಿರುಬೋಕಿ ಜೀವನ’ ಸಾಂಗ್ 1 ಲಕ್ಷಕ್ಕೂ ಹೆಚ್ಚು ಬಾರಿ ಜನರು ನೋಡಿದ್ದಾರೆ.
ಕಾಲೇಜಿನಿಂದ ಸಸ್ಪೆಂಡ್ ಆಗಿರುವ ಆರು ವಿದ್ಯಾರ್ಥಿಗಳ ಕತೆಯನ್ನು ಸಾಂಗ್‍ನಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಕರ್ಣ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ.
ರಕ್ಷಿತ್ ಶೆಟ್ಟಿ ಬರೆದ ಹಾಡಿಗೆ ಅಜನೀಶ್ ಲೋಕನಾಥ್ ದನಿಗೂಡಿಸಿದ್ದಾರೆ. ಈಗ ಬಿಡುಗಡೆಯಾಗಿರುವ ಹಾಡಿನಲ್ಲಿ ರಕ್ಷಿತ್ ಶೆಟ್ಟಿ ಜೊತೆಗೆ ರಶ್ಮಿಕಾ ಮಂದಣ್ಣ, ಅರವಿಂದ್ ಅಯ್ಯರ್, ಧನಂಜಯ್ ರಂಜನ್, ಅಶ್ವಿನ್ ರಾವ್, ಚಂದನ್ ಆಚಾರ್, ಶಂಕರ್ ಮೂರ್ತಿ ಮೊದಲಾದವರು ಹೆಜ್ಜೆ ಹಾಕಿದ್ದಾರೆ.
‘ಸಾರ್ ತಿರ್‍ಬೋಕಿ ಜೀವನ ನಮ್ಮದಲ್ಲ, ಖಾಲಿ ಕೂತು ಬೋರಾಗಿದೆ. ಬಾರಿಗೆ ಪರಾರಿ ಆಗುವ ಪೋರರಲ್ಲ, ದಾರಿ ಬೇರೇನೂ ಕಾಣದಾಗಿದೆ..’ ಎಂದು ಆರಂಭವಾಗುವ ಸಾಲುಗಳು ಕೊನೆಯವರೆಗೂ ಮುದ ನೀಡುತ್ತವೆ. ಈ ಹಾಡಿನ ಬಗ್ಗೆ ಟ್ವಿಟ್ಟರ್‍ನಲ್ಲೂ ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಕ್ಷಿತ್ ಶೆಟ್ಟಿಯ ಹಾಡಿನಿಂದಾಗಿ ಹಳೆಯ ಕಾಲೇಜು ದಿನಗಳು ನೆನಪಾದವು ಎಂದು ಟ್ವೀಟಿಗರು ಬರೆದುಕೊಂಡಿದ್ದಾರೆ.